ಕಾಣದ ಕೈಗಳಿಗೆ ಅರ್ಪಣೆ ... ಕಾರ್ಮಿಕರ ದಿನದ ಅಂಗವಾಗಿ ‘ರಾಬರ್ಟ್’ ಸ್ಪೆಷಲ್ ವೀಡಿಯೋ

Robert Final
Robert
Published on

ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಇಷ್ಟರಲ್ಲಿ ಬಿಡುಗಡೆಯಾಗಿರಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿರುವುದಷ್ಟೇ ಅಲ್ಲ, ಯಾವಾಗ ಬಿಡುಗಡೆ ಎಂಬುದು ಸಹ ಗೊತ್ತಾಗದಂತಾಗಿದೆ.

ಈ ಮಧ್ಯೆ ಚಿತ್ರತಂಡದವರು ಯೂಟ್ಯೂಬ್‌ನ ಆನಂದ್ ಆಡಿಯೋ ಚಾನಲ್‌ನಲ್ಲಿ ಒಂದು ಹೊಸ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಕಾರ್ಮಿಕರ ದಿನದ ಅಂಗವಾಗಿ, ಚಿತ್ರದ ಹಿಂದೆ ಕೆಲಸ ಮಾಡಿರುವ ನೂರಾರು ಕಾರ್ಮಿಕರ ಶ್ರಮವನ್ನು ತೋರಿಸುವ ನಿಟ್ಟಿನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಲಾಗಿದೆ.

‘ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು, ಬೆಳ್ಳಿ ಪರದೆಯ ಹಿಂದಿನ ನಿಜವಾದ ಮಿಂಚು, ನಮ್ಮ ‘ರಾಬರ್ಟ್’ ಚಿತ್ರದ ತಾಂತ್ರಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಶಯಗಳು’ ಎಂದು ಕಾರ್ಮಿಕರಿಗೆ ಈ ವೀಡಿಯೋ ಅರ್ಪಿಸಲಾಗಿದೆ. ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ‘ರಾಬರ್ಟ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕಾರ್ಮಿಕರು ಹೇಗೆಲ್ಲಾ ಶ್ರಮವಹಿಸಿದ್ದಾರೆ ಎಂದು ತೋರಿಸಲಾಗಿದೆ.

‘ರಾಬರ್ಟ್’ ಚಿತ್ರವನ್ನು ತರುಣ್ ಸುಧೀರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ‘ಹೆಬ್ಬುಲಿ’ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಜತೆಗೆ ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net