ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಬಯೋ-ಬಬಲ್ ವಾತಾವರಣ ಇಷ್ಟವಾಗಿದ್ದು ಯಾಕೆ..!

virat kohli for web bio bubble
Published on

ದುಬೈ: ಕರೊನಾ ವೈರಸ್ ಭೀತಿಯಿಂದ ಐಪಿಎಲ್ ಟೂರ್ನಿಯನ್ನು ಅರಬ್ ರಾಷ್ಟ್ರಕ್ಕೆ ಸ್ಥಳಾಂತರಿಸಲಾಯಿತು. ಟೂರ್ನಿ ಆಯೋಜಿಸುವ ಸಲುವಾಗಿ ಬಯೋ ಬಬಲ್ ವಾತಾವರಣಕ್ಕೆ ಮೊರೆ ಹೋಗಲಾಗಿದೆ. ಇದೇ ಬಯೋ ಬಬಲ್ ವಾತಾವರಣದಲ್ಲಿ ಇಂಗ್ಲೆಂಡ್‌ನಲ್ಲಿ ಈಗಾಗಲೇ ಯಶಸ್ವಿಯಾಗಿ ಕ್ರಿಕೆಟ್ ಸರಣಿಗಳನ್ನು ಆಯೋಜಿಸಲಾಗಿದೆ. ಇದೀಗ ಐಪಿಎಲ್‌ಗೂ ವೇದಿಕೆ ಸಜ್ಜಾಗಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಆಟಗಾರರು ಬಯೋ-ಬಬಲ್ ವಾತಾವರಣಕ್ಕೆ ಸಂಪೂರ್ಣವಾಗಿ ಒಗ್ಗಿಕೊಂಡಿದ್ದು, ವಾತಾವರಣ ಬದಲಾಗಿರುವುದಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಆಗಸ್ಟ್ 21 ರಂದು ಯುಎಇಗೆ ಬಂದಿಳಿದ ಆರ್‌ಸಿಬಿ, ಕ್ವಾರಂಟೈನ್ ಅವಧಿ ಮುಕ್ತಾಯದ ಬಳಿಕ 2 ವಾರ ಅಭ್ಯಾಸ ನಡೆಸಿದೆ. ಜತೆಗೆ ಕೆಲ ಅಭ್ಯಾಸ ಪಂದ್ಯಗಳನ್ನಾಡಿದೆ. ಸದ್ಯದ ವಾತಾವರಣಕ್ಕೆ ಎಲ್ಲರೂ ಒಗ್ಗಿಕೊಂಡಿದ್ದೇವೆ. ವಾತಾವರಣ ಹೊಂದಿಕೊಳ್ಳುವುದೇ ದೊಡ್ಡ ಬದಲಾವಣೆ, ಮೊದಲ ದಿನವೇ ಇದು ಅನುಭವಕ್ಕೆ ಬಂತು’ ಎಂದು ವರ್ಚುವಲ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು. ಆರಂಭದಲ್ಲೇ ಬಯೋ - ಬಬಲ್ ಕುರಿತು ಕೇಳಿದಾಗ, ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೀಗ ಸಂಪೂರ್ಣ ರಿಲ್ಯಾಕ್ಸ್ ಮೂಡ್‌ನಲ್ಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.

ಆಟವನ್ನು ಪ್ರೀತಿಸುವುದರಿಂದಲೇ ಆಡುತ್ತೇವೆ. ನಾವು ಹೇಗೆ ಅಭ್ಯಾಸ ಮಾಡಿದೇವು ಎಂದು ದಿನದ ಕೊನೆಯಲ್ಲಿ ತಿಳಿಯುತ್ತದೆ. ಪ್ರೇಕ್ಷಕರು ಆಟದ ಭಾಗ, ಆದರೆ ಆಡುವಾಗ ಯಾವುದೂ ಮುಖ್ಯವಲ್ಲ’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಜತೆಗೆ ಹಿರಿಯ ಆಟಗಾರ ಪಾರ್ಥಿವ್ ಪಟೇಲ್ ಹಾಗೂ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಉಪಸ್ಥಿತರಿದ್ದರು. ಆರ್‌ಸಿಬಿ ತಂಡ ಸೆ.21 ರಂದು ದುಬೈನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮೂರು ಪ್ರಶಸ್ತಿ ಸುತ್ತಿನಲ್ಲಿ ಎಡವಿರುವ ಆರ್‌ಸಿಬಿ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net