

ವಿಜಯವಾಣಿ ಸುದ್ದಿಜಾಲ ಉಡುಪಿ:
ಗುರಿಯೆಡೆಗೆ ದಾರಿ ತೋರಿ, ಸುಜ್ಞಾನ ನೀಡಿ ಮುನ್ನಡೆಸುವ ಗುರುಗಳನ್ನು ಗೌರವಿಸುವ ಸತ್ಕಾರ್ಯ ಸದಾ ಪ್ರಶಂಸನೀಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂದಾಪುರದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ಘೋಷಣೆಯಾಗಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಿಂಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ಶಿಕ್ಷಕ ವೃಂದಕ್ಕೇ ಅಪಚಾರ ಎಸಗಿದೆ. ಇದು ಖಂಡನೀಯವಾಗಿದ್ದು, ಸರ್ಕಾರದ ವರ್ತನೆ ವಿರೋಧಿಸಿ ಹೋರಾಟ ಅನಿವಾರ್ಯವೆನಿಸಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ರೇಷ್ಮಾ ಶೆಟ್ಟಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಜೀವನದ ಯಶಸ್ಸಿಗೆ ವಿದ್ಯೆ ಕಲಿಸಿದ ಗುರುಗಳ ಆಶೀರ್ವಾದ ಅತಿ ಅಗತ್ಯ ಎಂದರು.
ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದಿನೇಶ್ ಅಮೀನ್, ಕಿರಣಕುಮಾರ್ ಬೈಲೂರು, ಪೆರ್ಣಂಕಿಲ ಶ್ರೀಶ ನಾಯಕ್, ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಂ. ಅಂಚನ್, ರಾಜೀವ ಕುಲಾಲ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ರೀವತ್ಸ, ನಿತಿನ್ ಪೈ ಇತರರು ಉಪಸ್ಥಿತರಿದ್ದರು.
ಉಡುಪಿ ನಗರ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿಗಳಾದ ಶಾಂತಿ ಮನೋಜ್ ನಿರೂಪಿಸಿದರು. ಸರೋಜಾ ಶೆಣೈ ವಂದಿಸಿದರು.
ಶಿಕ್ಷಣ- ಸುಬ್ರಾಯ ಉಪಾಧ್ಯಾಯ, ಯಕ್ಷಗಾನ- ರತ್ನಾಕರ ಶೆಣೈ, ಯೋಗ& ಅನಿತಾ ಡಿ. ಸುವರ್ಣ, ಈಜು- ಗಂಗಾಧರ್ ಕಡೆಕಾರ್, ಭಗವದ್ಗೀತೆ- ಮೀನಾಕ್ಷಿ ಪೈ, ಸಂಗೀತ- ವಿನುತಾ ಆಚಾರ್ಯ, ಕೀಬೋರ್ಡ್- ರವಿರಾಜ್ ಉಪಾಧ್ಯಾಯ, ಕ್ರೀಡೆ- ಗಣೇಶ್ ಕೋಟ್ಯಾನ್, ಹುಲಿವೇಷ- ಶಿವಣ್ಣ, ತಾಲೀಮು ಕವಾಯತ್- ಸಿರಿಲ್ ನೊರೋಹ್ನ, ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷೆಯಾಗಿ ನಿಯುಕ್ತರಾದ ಮಾಯಾ ಕಾಮತ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು.