More

    15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ಲಂಡನ್​: 15ರ ವಯಸ್ಸಿನಲ್ಲಿ ಶಿಕ್ಷಕಿ ಜತೆ ಲೈಂಗಿಕ ಸಂಭೋಗ ನಡೆಸಿದ್ದಾಗಿ ಹೇಳಿಕೊಂಡಿರುವ ವಿದ್ಯಾರ್ಥಿಯೊಬ್ಬ ಶಿಕ್ಷಕಿ ಜತೆಗಿನ ತನ್ನ ಸಂಬಂಧ ಕುರಿತಾಗಿ ಶಾಲೆಯಲ್ಲಿ ಹರಡಿದ ವದಂತಿಯಿಂದಾಗಿ ತುಂಬಾ ಚಿಂತೆ ಮತ್ತು ಭೀತಿಗೆ ಒಳಗಾಗಿದ್ದಾಗಿ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿದ್ದಾನೆ.

    ಶಿಕ್ಷಕಿ ಕ್ಯಾಂಡೈಸ್​ ಬಾರ್ಬರ್ (35), ಶಾಲಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾಗ ತಮ್ಮ ವಿದ್ಯಾರ್ಥಿ(ಸಂತ್ರಸ್ತ ಬಾಲಕ ಅಪ್ರಪ್ತಾನಾಗಿರುವುದರಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ) ಜತೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಎರಡನೇ ಬಾರಿಗೆ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಒಂದು ವೇಳೆ ತನ್ನ ಸಂಬಂಧವನ್ನು ಬಹಿರಂಗಪಡಿಸಿದರೆ ಮುಂದಿನ ದಿನಗಳಲ್ಲಿ ನಿನ್ನ ಪರಿಸ್ಥಿತಿ ತುಂಬಾ ವ್ಯತಿರಿಕ್ತವಾಗಿರುತ್ತದೆ ಎಂದು ಶಿಕ್ಷಕಿ ಕ್ಯಾಂಡೈಸ್​, ವಿದ್ಯಾರ್ಥಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿರಿ: ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    2018ರ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ ನಡುವೆ ಸ್ನ್ಯಾಪ್​ಚಾಟ್​ ಮೂಲಕ ತನ್ನ ಟಾಪ್​ಲೆಸ್​ ಫೋಟೋಗಳನ್ನು ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದ ಆರೋಪ ಮೇಲೆ ಕಳೆದ ಸೆಪ್ಟೆಂಬರ್​ನಲ್ಲಿ ಕ್ಯಾಂಡೈಸ್ ಶಿಕ್ಷೆಗೆ ಗುರಿಯಾಗಿದ್ದಳು. ಆದರೆ, ಶಿಕ್ಷಕಿಯೊಬ್ಬಳು ನಂಬಿಕೆಯ ಸ್ಥಾನದಲ್ಲಿರುವಾಗ ಮಗುವನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಲು ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಈ ಫೋಟೋ ಹಂಚಿಕೊಂಡ ಪ್ರಕರಣದಿಂದ ಆಕೆಯನ್ನು ಖುಲಾಸೆಗೊಳಿಸಲಾಗಿತ್ತು.

    ಇದನ್ನೂ ಓದಿರಿ: ಗೇ ಲವ್ವರ್​ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..

    ಮೂರು ಪ್ರಕರಣ ಬಾಕಿ
    ಆದರೆ, ಇಂಗ್ಲೆಂಡ್​ನ ಐಲೆಸ್‌ಬರಿ ಕ್ರೌನ್ ಕೋರ್ಟ್‌ನ ನ್ಯಾಯಾಧೀಶರು 16 ವರ್ಷದೊಳಗಿನ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸುವ ಮೂರು ಗಂಭೀರ ಆರೋಪಗಳ ಮೇಲೆ ತೀರ್ಪುಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕಳೆದ ಸೋಮವಾರ ಮಾತನಾಡಿರುವ ಪ್ರಾಸಿಕ್ಯೂಟರ್ ರಿಚರ್ಡ್ ಮಿಲ್ನೆ, 16 ವರ್ಷದೊಳಗಿನ ಮಗುವನ್ನು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಿರುವ ಕ್ಯಾಂಡೈಸ್​, ಮೂರು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆ ಹಿನ್ನೆಲೆ
    2018ರ ಸೆಪ್ಟೆಂಬರ್​ನಲ್ಲಿ ಕ್ರೀಡಾ ಪ್ರದರ್ಶನ ನೀಡುವಂತೆ ಬಾಲಕನನ್ನು ಕೇಳಿದ ಕ್ಯಾಂಡೈಸ್​, ವಿದ್ಯಾರ್ಥಿಯ ಫೋನ್​ ತೆಗೆದುಕೊಂಡು ಸ್ನ್ಯಾಪ್​ಚಾಟ್​ ಇನ್​ಸ್ಟಾಲ್​ ಮಾಡಿದ್ದಳು. ಇದನ್ನು ನೋಡಿದ್ದ ವಿದ್ಯಾರ್ಥಿ ಏನಿದು ವಿಚಿತ್ರ ಎಂದು ಭಾವಿಸಿದ್ದ. ಆರಂಭದಲ್ಲೇ ಸಾಮಾನ್ಯವಾಗಿಯೇ ಸಂದೇಶದ ಕಳುಹಿಸುತ್ತಿದ್ದ ಕ್ಯಾಂಡೈಸ್​, ವಾರ ಕಳೆದ ಬೆನ್ನಲ್ಲೇ ಕಾಮ ಪ್ರಚೋದನೆಯ ಸಂದೇಶ ಕಳುಹಿಸಲು ಆರಂಭಿಸಿದಳು. ಹೀಗೆ ಅನೇಕ ಬಾರಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಳೆ. ಈ ಮೂಲಕ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುವಾಗಲೂ ವಿದ್ಯಾರ್ಥಿ ಮುಜುಗರಕ್ಕೀಡು ಮಾಡಿದ್ದಾಳೆ.

    ಇದನ್ನೂ ಓದಿರಿ: ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

    15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ನಿನ್ನ ಮಗುವಿಗೆ ಗರ್ಭಿಣಿಯಾಗಬಹುದು
    2018ರ ಅಕ್ಟೋಬರ್​ನಲ್ಲಿ ಒಂದು ದಿನ ಶಾಲೆ ಮುಗಿದ ಬಳಿಕ ವಿದ್ಯಾರ್ಥಿಗೆ ಮಸೇಜ್​ ಮಾಡಿದ ಕ್ಯಾಂಡೈಸ್​, ಆತನನ್ನು ತನ್ನ ಕಾರಿನಲ್ಲಿ ಪಿಕ್​ ಮಾಡಿಕೊಂಡು ಖಾಸಗಿ ಏರಿಯಾಗೆ ತೆರಳಿ ಆತನೊಂದಿಗೆ ಸೆಕ್ಸ್​ ಮಾಡಿದ್ದಾಳೆ. ಇದಾದ ಬಳಿಕ ಇಬ್ಬರ ಸಂಬಂಧ ಹೀಗೆ ಮುಂದುವರಿದಿದೆ. ಇತ್ತ ಶಾಲೆಯಲ್ಲಿ ವದಂತಿಗಳು ಸಹ ಹರಿದಾಡಲಾರಂಭಿಸಿತ್ತು. 2020ರ ಜನವರಿಯಲ್ಲಿ ತನ್ನ ಸಂಬಂಧದ ಬಗ್ಗೆ ವಿದ್ಯಾರ್ಥಿ ಮುಖ್ಯ ಶಿಕ್ಷಕನಿಗೆ ಸುಳ್ಳು ಹೇಳಿದ್ದ. ಇದರ ನಡುವೆ ನಿನ್ನ ಮಗುವಿಗೆ ಗರ್ಭಿಣಿಯಾಗಬಹುದೆಂದು ಕ್ಯಾಂಡೈಸ್​ ವಿದ್ಯರ್ಥಿಗೆ ಹೇಳುವ ಮೂಲಕ ಶಾಕ್​ ನೀಡಿದ್ದಳು.

    ಇದನ್ನೂ ಓದಿರಿ: ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ವಿಡಿಯೋ ಸಂದರ್ಶನದಲ್ಲಿ ನೋವು ಬಿಚ್ಚಿಟ್ಟ ಬಾಲಕ
    ನ್ಯಾಯಾಧೀಶರಿಗೆ ತೋರಿಸಿರುವ ವೀಡಿಯೊ ಸಂದರ್ಶನದಲ್ಲಿ, ಬಾಲಕನು ಲೈಂಗಿಕ ಸಂಭೋಗದ ನಂತರ ಶಾಲೆಯಲ್ಲಿ ಕ್ಯಾಂಡೈಸ್​ಳನ್ನು ನೋಡುವುದು ವಿಚಿತ್ರವಾಗಿತ್ತು ಮತ್ತು ವದಂತಿಗಳು ಹರಡಲು ಪ್ರಾರಂಭವಾಯಿತು. ಇದರಿಂದ ನಾನು ಗಾಬರಿಗೆ ಒಳಗಾದೆ. ಏನು ಮಾಡಬೇಕೆಂದು ತಿಳಿಯಲಿಲ್ಲ. ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ನನ್ನ ಸ್ನೇಹಿತರಿಗೆ ಎಲ್ಲವನ್ನು ಹೇಳಿದಾಗ ಅವರು ಶಾಕ್​ ಆದರು. ಅಲ್ಲದೆ, ಶಿಕ್ಷಕಿಯಿಂದ ಇದನ್ನು ನಿರೀಕ್ಷಿಸಿಯು ಇರಲಿಲ್ಲ. ನಂಬಲು ಅವರು ತಯಾರಿರಲಿಲ್ಲ ಎಂದಿದ್ದಾನೆ.

    ವಿದ್ಯಾರ್ಥಿಗೆ ಬೆದರಿಕೆ
    ಗರ್ಭಿಣಿ ವಿಚಾರಕ್ಕೆ ಬಂದಾಗ ಇದು ನನ್ನದೋ ಅಥವಾ ಅವಳ ಗಂಡನದೋ ಎಂದು ಆಕೆಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಳು. ಹೀಗಿರುವಾಗ ಗರ್ಭಪಾತವಾದಾಗ ಕರೆ ಮಾಡಿ ಕಣ್ಣೀರಿಟ್ಟಳು. ಇದು ನನಗೆ ಅರ್ಥವಾಗಲಿಲ್ಲ. ಇದು ನನ್ನ ತಪ್ಪು ಎಂದು ನನಗೆ ತಿಳಿದಿರಲಿಲ್ಲ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಅಲ್ಲದೆ, ಆಕೆಯ ಮೇಲೇನಾದರೂ ಅತ್ಯಾಚಾರ ಆರೋಪ ಮಾಡಿದರೆ ನಿನ್ನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ ಎಂತಲೂ ಕ್ಯಾಂಡೈಸ್​ ಬೆದರಿಕೆ ಹಾಕಿದ್ದಳಂತೆ.

    ಇದನ್ನೂ ಓದಿರಿ: ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!

    15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ವಿಚಾರಣೆ ಮುಂದುವರಿದಿದೆ…
    ಈ ಪ್ರಕರಣದಲ್ಲಿ ಅವನು-ಅವಳು ಎಂಬ ವ್ಯತ್ಯಾಸದ ಸಂಗತಿಯಲ್ಲ. ಕಾನೂನು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಕಾನೂನಿನಲ್ಲಿ ಅವರಿಬ್ಬರು ಲೈಂಗಿಕ ಸಂಭೋಗ ನಡೆಸಲು ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ ಎಂದು ಪ್ರಾಸಿಕ್ಯೂಟರ್​ ರಿಚಾರ್ಡ್​ ಮಿಲ್ನೆ ಹೇಳಿದ್ದು, ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

    ಕಸ್ಟಮ್ಸ್​ ಅಧಿಕಾರಿ ಪತ್ನಿ ಟಾಯ್ಲೆಟ್​ ಒಳಗಡೆ ಕಂತೆಕಂತೆ ನೋಟು ಎಸೆಯುವುದನ್ನು ಕಂಡು ಬೆಚ್ಚಿಬಿದ್ದ ಜನ!

    VIDEO: ಹೆಡ್‌ಫೋನ್‌ನಿಂದ ಕುತ್ತು: ಮಹಿಳೆ ಮೇಲೆ ಹತ್ತಿದ ರೈಲು- ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

    ವಾಹನ ಸವಾರರೇ ದಾಖಲೆ ಇಟ್ಟುಕೊಂಡೇ ರಸ್ತೆಗೆ ಇಳಿಯಿರಿ: 1 ತಿಂಗಳು ನಡೆಯಲಿದೆ ವಿಶೇಷ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts