ಬೆಳಗಾವಿಯಲ್ಲಿ ವಿಧ್ಯಾರ್ಥಿಗಳಿಗೆ ಹೂವಿನ ಮಳೆಗೈದು ಶಾಲೆಗೆ ಸ್ವಾಗತಿಸಿದ ಶಿಕ್ಷಕರು

IMG-20230531-WA0022.webp
Published on

ಬೆಳಗಾವಿ : ನಗರ ಸೇರಿದಂತೆ ಜಿಲ್ಲಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಬುಧವಾರ ಪುನಾರಂಭಗೊಂಡವು. ಬೇಸಿಗೆ ರಜೆ ಬಳಿಕ ಶಾಲೆಯತ್ತ ಹೆಜ್ಜೆ ಇಟ್ಟ ವಿದಾರ್ಥಿಗಳಿನ್ನು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಹೂವಿನ  ಮಳೆಗರೆದು ಸಡಗರ ಸಂಭ್ರಮದಿಂದ ಬರಮಾಡಿಕೊಂಡರು.

ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳು ಸೋಮವಾರವೇ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಬಹು ಉತ್ಸಾಹ ಹಾಗೂ ಸಂತೋಷದಿಂದ ಶಾಲೆ ಮೆಟ್ಟಿಲೇರಿದ್ದಾರೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಂತೆಯೇ ಖಾಸಗಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಬೆಳಗಾವಿ ನಗರದಲ್ಲಿನ ಸರ್ದಾರ ಪ್ರೌಢ  ಶಾಲೆಯ ಆವರಣವನ್ನು ಬಾಳೆಕಂಬ, ತಳಿರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ಶಾಲೆಯ ಎಲ್ಲಾ ಶಿಕ್ಷಕರು ಮುಖ್ಯದ್ವಾರದ ಅಕ್ಕಪಕ್ಕ ನಿಂತು ಚಪ್ಪಾಳೆ ತಟ್ಟಿ, ಹಣೆಗೆ ತಿಲಕವಿಟ್ಟು, ಹೂವು, ಸಿಹಿ ನೀಡಿ ಸ್ವಾಗತಿಸಿದರು.

ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು ಸೋಮವಾರದಿಂದಲೇ ಕೊಠಡಿ, ಆವರಣವನ್ನು ಸ್ಚಚ್ಛಗೊಳಿಸುವಲ್ಲಿ ನಿರತರಾಗಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಎಲ್ಲ ಶಿಕ್ಷಕರು ಶಾಲಾ ಕೊಠಡಿ, ಆವರಣಗಳನ್ನು ಗುಡಿಸಿ, ನೀರು ಹಾಕಿ ಶುಚಿಗೊಳಿಸಿ ತೋರಣ, ರಂಗೋಲಿ, ಬಾಳೆಕಂಬ ನೆಟ್ಟು ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net