ವಿದ್ಯಾರ್ಥಿಯ ಗುಪ್ತಾಂಗಕ್ಕೆ ಗಾಜಿನ ಕ್ಲೀನರ್​ ಸಿಂಪಡಿಸಿದ ಶಿಕ್ಷಕಿ: ಮುಂಬೈನಲ್ಲೊಂದು ಆಘಾತಕಾರಿ ಘಟನೆ! School

untitled-design-39-688b14118e21d
Published on

School : ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯ ಗುಪ್ತಾಂಗಕ್ಕೆ ಗಾಜಿನ ಕ್ಲೀನರ್​ ಸಿಂಪಡಿಸಿದ ಆಘಾತಕಾರಿ ಘಟನೆ ಮುಂಬೈನ ನಲ್ಲಸೋಪರಾದ ಹೊವಾಡ್​ರ್ ಇಂಗ್ಲಿಷ್​ ಶಾಲೆಯಲ್ಲಿ ನಡೆದಿದೆ.

ಆರೋಪಿ ಶಿಕ್ಷಕಿಯನ್ನು ನಿಜಾವುದ್ದೀನ್ ಎಂದು ಗುರುತಿಸಲಾಗಿದೆ. ಈಕೆ 8 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಗಾಜಿನ ಕ್ಲೀನರ್​ನ್ನು ಸಿಂಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ದುರ್ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತ ವಿದ್ಯಾರ್ಥಿಯ ಪಾಲಕರು ಶಿಕ್ಷಿಕಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆಯು ಪಾಲಕರು ಮತ್ತು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಶಿಕ್ಷಣ ಇಲಾಖೆಯಿಂದ ತನಿಖೆ

ಹೊವಾರ್ಡ್ ಇಂಗ್ಲಿಷ್ ಶಾಲೆಯು ರಾಜ್ಯ ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದು, ಔರಂಗಾಬಾದ್ ಮೂಲದ ಬೇರೆ ಶಾಲೆಯಿಂದ ಲೀವಿಂಗ್ ಸರ್ಟಿಫಿಕೇಟ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆ ವಿದ್ಯಾರ್ಥಿ 3 ವರ್ಷಗಳ ಕಾಲ ಅದೇ ಶಾಲೆಯುಲ್ಲಿ ವ್ಯಾಸಂಗ ಮಾಡಿದ್ದರಿಂದ ಈ ವಿಚಾರದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ವರದಿಯ ನಂತರ ಪಾಲ್ಘರ್ ಜಿಲ್ಲಾ ಪರಿಷತ್ ಘಟನೆ ಬಗ್ಗೆ ತಾಲೂಕು ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಗಮನಾರ್ಹ ಬೆಳವಣಿಗೆಗಳ ನಂತರ, ಅಧಿಕಾರಿಗಳು ಶಾಲೆಗೆ ನೋಟಿಸ್​ ನೀಡಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದಾರೆ. ಇನ್ನು ನೋಟಿಸ್​ ಹೊರತಾಗಿಯೂ ಶಾಲೆ ಮುಂದುವರೆಸಿದರೆ ಶಾಲೆಯ ವಿರುದ್ಧ ಎಫ್​ಐಆರ್​ ದಾಖಲಿಸುವುದಾಗಿ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಇಲಾಖೆಯು ಗಮನಹರಿಸಿರುವುದು ನನಗೆ ಖುಷಿಯಾಗಿದೆ. ನನ್ನ ಮಗನಿಗೆ ನ್ಯಾಯ ಸಿಗಲಿ ಮತ್ತೆ ಬೇರೆ ಯಾವುದೇ ಮಕ್ಕಳಿಗೆ ಈ ರೀತಿ ತೊಂದರೆ ಆಗಬಾರದೆಂದು ನಾನು ಬಯಸುತ್ತೇನೆ. ತನಿಖೆ ಮುಗಿಯಲಿ, ಅದರ ವರದಿಯನ್ನು ಅವಲಂಬಿಸಿ ನಾನು ಮುಂದುವರೆಯುತ್ತೇನೆ ಎಂದು ವಿದ್ಯಾರ್ಥಿಯ ತಾಯಿ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

@unexplored_vasai  ಎಂಬ ಇನ್‌ಸ್ಟಾಗ್ರಾಮ್ ಖಾತೆದಾರ ಇಡೀ ಘಟನೆಯನ್ನು ತಮ್ಮ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರಿಂದ ಈ ವಿಚಾರದ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಶಿಕ್ಷಕರ ಕೃತ್ಯವನ್ನು ನೆಟ್ಟಿಗರು ಖಂಡಿಸಿ, ವಿದ್ಯಾರ್ಥಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಶಿಕ್ಷಕರು ಈ ರೀತಿಯಾಗಿ ಯೋಚಿಸಿದರೆ ಹಾಗೂ ವರ್ತಿಸಿದರೆ, ಅವರು ಆ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಹರಲ್ಲ" ಎಂದು ಒಬ್ಬ ಬಳಕೆದಾರ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net