ಮಗನ ಜೊತೆ ಫೋನ್​​ನಲ್ಲಿ ಮಾತನಾಡುತ್ತಿದ್ದ ಶಿಕ್ಷಕ ಛಾವಣಿಯಿಂದ ಬಿದ್ದು ಸಾವು | Teacher

Teacher
Published on

Teacher: ಶಿಕ್ಷಕನೊಬ್ಬ ಮಗನ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದಾಗ ತನ್ನ ಮನೆಯ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ ದುರಂತ ಬುಧವಾರ (ಜೂ.4) ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.

ಮೃತರನ್ನು ಭಿಂಡ್ ಜಿಲ್ಲೆಯ ಗಹೋದ್ ಗ್ರಾಮದ ನಿವಾಸಿ ಹೇಮಂತ್ ಕುಮಾರ್ ಮಹೋರ್ ಎಂದು ಗುರುತಿಸಲಾಗಿದ್ದು, ಬುಧವಾರ ರಾತ್ರಿ 8:30 ರ ಸುಮಾರಿಗೆ ಈ ಘಟನೆ ನಡೆದಿದೆ. ಇವರು ಛತ್ತರ್‌ಪುರ ಜಿಲ್ಲೆಯ ಚಾಂಡ್ಲಾದ ಸಿಎಂ ರೈಸ್ ಶಾಲೆಯಲ್ಲಿ ಶಿಕ್ಷಕನಾಗಿದ್ದರು.

ಹೇಮಂತ್ ತನ್ನ ಬಾಡಿಗೆ ಮನೆಯ ಛಾವಣಿಯ ಮೇಲೆ ನಿಂತು ತನ್ನ ಹಿರಿಯ ಮಗ ಸಾಹಿಲ್ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಆಯತಪ್ಪಿ ಛಾವಣಿಯಿಂದ ಕೆಳಗೆ ಬಿದ್ದಿದ್ದಾನೆ ಎಂದು ಹೇಳಲಾಗುತ್ತದೆ.

ಸುಮಾರು ಎರಡು ಗಂಟೆಗಳ ನಂತರ, ಕುಟುಂಬವು ಹೇಮಂತ್ ಅವರನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸಿತು ಆದರೆ ಸಾಧ್ಯವಾಗಲಿಲ್ಲ. ಅದಾದ ನಂತರ ಕುಟುಂಬದವರು ಅವನ ಸ್ನೇಹಿತನಿಗೆ ಕರೆ ಮಾಡಿ ಅವನು ಎಲ್ಲಿದ್ದಾನೆ ಎಂದು ಕೇಳಿದರು. ಆದರೆ, ಅವನ ಬಗ್ಗೆ ಅವರಿಗೆ ಯಾವುದೇ ಸುಳಿವು ಸಿಗಲಿಲ್ಲ.

ನಂತರ, ಅವರ ಸ್ನೇಹಿತ ಹೇಮಂತ್ ಮನೆಯನ್ನು ತಲುಪಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ತಕ್ಷಣ ಆಸ್ಪತ್ರೆಗೆ ಅವರನ್ನು ಕರೆದೊಯ್ದರು, ಅಲ್ಲಿ ವೈದ್ಯರು ಹೇಮಂತ್ ಅವರು ಆಗಲೇ ಮೃತಪಟ್ಟಿದ್ದಾರೆ ತಿಳಿಸಿದರು.

ಮಾಹಿತಿ ಪಡೆದ ನಂತರ ಪೊಲೀಸರು ಈ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net