ಸೀಮೆಸುಣ್ಣ ಮುರಿದ ಎಂದು ಸ್ಟೀಲ್​ ಸ್ಕೇಲ್​ನಿಂದ ಥಳಿಸಿ ಗಾಯಗೊಳಿಸಿದ ಶಿಕ್ಷಕ!

5
Published on

ಮೈಸೂರು: ಇಲ್ಲೊಬ್ಬ ಶಿಕ್ಷಕ ಕ್ಷುಲಕ ಕಾರಣಕ್ಕೆ ಸ್ಟೀಲ್ ಸ್ಕೇಲ್ ನಿಂದ ವಿದ್ಯಾರ್ಥಿಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಎಚ್​.ಡಿ ಕೋಟೆ ನಗರದಲ್ಲಿ ನಡೆದಿದೆ.

ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 8ನೇ ತರಗತಿಯ ಅಮೃತ್ ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಸಿದ್ದರಾಜು ಸ್ಟೀಲ್ ಸ್ಕೇಲ್​ನಿಂದ ಥಳಿಸಿದ್ದಾರೆ.

ಇದರಿಂದಾಗಿ ಅಮೃತ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಶಿಕ್ಷಕ ಸಿದ್ದರಾಜು ಪೋಷಕರಿಗೆ ಕರೆ ಮಾಡಿ ಅಮೃತ್​ ಕಟರ್​ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ.

ಸದ್ಯ ಗಾಯಾಳು ಅಮೃತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನ ನಡೆದ ನಂತರ ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿ ಉದಯಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈಗ ಎಚ್​.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net