

Teacher: ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅರೆನಗ್ನವಾಗಿ ವಿಡಿಯೋ ಕಾಲ್ ಮಾಡಿದ ಮಾಡಿದ ಆರೋಪದ ಮೇಲೆ ಶಾಲಾ ಶಿಕ್ಷಕಿಯೊಬ್ಬಳನ್ನು ಬಂಧಿಸಲಾಗಿದೆ. ಬಾಲಕನ ತಂದೆ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮುಂಬೈನ ಪ್ರಮುಖ ಶಾಲೆಯೊಂದರ 40 ವರ್ಷದ ಮಹಿಳಾ ಶಿಕ್ಷಕಿ ವಿವಾಹಿತಳಾಗಿದ್ದು, 16 ವರ್ಷದ ಬಾಲಕನ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಬಾಲಕನ ತಂದೆ ದೂರು ನೀಡಿದ ವಾರದ ನಂತರ ಶಿಕ್ಷಕಿಯನ್ನು ಬಂಧಿಸಲಾಗಿದೆ.
ಶಿಕ್ಷಕಿ ಕಳೆದ ಕೆಲವು ದಿನಗಳಿಂದ ಇನ್ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಬಾಲಕನಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಳು. ಬಳಿಕ ಅರೆನಗ್ನಳಾಗಿ ವಿಡಿಯೋ ಕಾಲ್ ಮಾಡಿ ಮಾತನಾಡ್ತಿದ್ದಳು. ಶಿಕ್ಷಕಿಯ ವರ್ತನೆ ಬಾಲಕನ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಬಾಲಕನ ತಂದೆ ದೂರು ನೀಡಿದ್ದಾರೆ. ಶಿಕ್ಷಕಿಯನ್ನು ಬಂಧಿಸಿ ಪೋಕ್ಸೋ ಕೇಸ್ ದಾಖಲಿಸಿ ತನಿಖೆ ನಡೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಕಿಯು ತನ್ನ ವಿದ್ಯಾರ್ಥಿಗಳೊಂದಿಗೆ ಇಂತಹ ವರ್ತನೆಯ ಇತಿಹಾಸವನ್ನು ಹೊಂದಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆಕೆಯ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಾಕ್ಷ್ಯಕ್ಕಾಗಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ವಾರ್ಷಿಕ ಕಾರ್ಯಕ್ರಮಕ್ಕಾಗಿ ನಡೆದ ವಿವಿಧ ಸಭೆಗಳಲ್ಲಿ ತಾನು ಹದಿಹರೆಯದ ಹುಡುಗರತ್ತ ಆಕರ್ಷಿತಳಾಗಿದ್ದೆ ಎಂದು ಆರೋಪಿ ಶಿಕ್ಷಕಿ ಪೊಲೀಸರ ಮುಂದೆ ಹೇಳಿದ್ದಾಳೆ ಎಂದು ವರದಿಯಾಗಿದೆ.
ಬಾಲಕ ಆರಂಭದಲ್ಲಿ ಹಿಂಜರಿಯುತ್ತಿದ್ದ, ಶಿಕ್ಷಕಿಯನ್ನು ಅವೈಡ್ ಮಾಡುತ್ತಿದ್ದನು ಎನ್ನಲಾಗಿದೆ. ಶಿಕ್ಷಕಿ ಸಹಾಯಕ್ಕಾಗಿ ತನ್ನ ಮಹಿಳಾ ಸ್ನೇಹಿತೆಯೊಬ್ಬಳನ್ನು ಸಂಪರ್ಕಿಸಿದ್ದಾಳೆ. ಆ ಮಹಿಳೆ ಬಾಲಕನನ್ನು ಸಂಪರ್ಕಿಸಿ ವಯಸ್ಸಾದ ಮಹಿಳೆಯರು ಮತ್ತು ಹುಡುಗರ ನಡುವೆ ಸಂಬಂಧ ಈಗ ಸಾಕಷ್ಟು ಸಾಮಾನ್ಯವಾಗಿವೆ. ಶಿಕ್ಷಕಿ ಜೊತೆ ಮುಂದುವರೆಯುವಂತೆ ಬಾಲಕನಿಗೆ ಒತ್ತಾಯಿಸಿರುವ ಆರೋಪದ ಮೇಲೆ ಆ ಮಹಿಳೆ ವಿರುದ್ಧವೂ ದೂರು ದಾಖಲಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)