More

  ಟೀ vs ಕಾಫಿ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

  ಟೀ (Tea) ಅಥವಾ ಕಾಫಿ (Coffee) ಈ ಎರಡನ್ನು ಕುಡಿಯುವುದನ್ನು ಹಲವರು ಆನಂದಿಸುತ್ತಾರೆ. ಕೆಲವರಿಗೆ ಟೀ ಕುಡಿಯಲು ಇಷ್ಟವಾದರೆ, ಇನ್ನೂ ಕೆಲವರಿಗೆ ಕಾಫಿ ಕುಡಿಯಲು ಇಷ್ಟವಾಗುತ್ತದೆ. ಆದರೆ, ಈ ಎರಡು ಪಾನೀಯಗಳಲ್ಲಿ ಯಾವುದು ನಮ್ಮ ದೇಹಕ್ಕೆ ಆರೋಗ್ಯಕರ ಎಂಬ ವಿಷಯದ ಬಗ್ಗೆ ಕಾಲಕಾಲಕ್ಕೆ ಅನೇಕ ಅಧ್ಯಯನಗಳು ಮುನ್ನೆಲೆಗೆ ಬರುತ್ತಿವೆ. ಹಾಗಾದರೆ ಈ ಎರಡು ಪಾನೀಯಗಳಲ್ಲಿ ಯಾವುದು ಉತ್ತಮ ಎಂಬುದನ್ನು ನಾವೀಗ ತಿಳಿಯೋಣ.

  ಚಹಾ ಆರೋಗ್ಯಕರ ಆಯ್ಕೆಯಾಗಿದೆ
  ಕಾಫಿಗೆ ಹೋಲಿಕೆ ಮಾಡಿದರೆ ಚಹಾ ಉತ್ತಮ ಆಯ್ಕೆಯಾಗಿದೆ. ಚಹಾದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಬಹಳ ಹಿಂದಿನಿಂದಲೂ ಕೇಳಿದ್ದೇವೆ. ನೈಸರ್ಗಿಕವಾಗಿ ಅಸ್ತಿತ್ವದಲ್ಲಿರುವ ಸಾವಿರಾರು ಸಸ್ಯ ಸಂಯುಕ್ತಗಳ ದೊಡ್ಡ ಗುಂಪಿನ ಪಾಲಿಫಿನಾಲ್‌ಗಳು ಚಹಾದಲ್ಲಿ ಅಧಿಕವಾಗಿದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಚಹಾವು ಚಯಾಪಚಯವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಇದು ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ. ಗ್ರೀನ್​ ಟೀನಲ್ಲಿ ಕಂಡುಬರುವ ಕ್ಯಾಟೆಚಿನ್‌ಗಳು ತೂಕ ನಷ್ಟ ಮತ್ತು ಸುಧಾರಿತ ಮೆದುಳಿನ ಕಾರ್ಯಕ್ಕೆ ನೆರವಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಚಹಾವು ಸಹಾಯ ಮಾಡುತ್ತದೆ.

  ಕಡಿಮೆ ಕೊಲೆಸ್ಟ್ರಾಲ್, ಕಡಿಮೆ ರಕ್ತದೊತ್ತಡ, ಕಡಿಮೆ ಉರಿಯೂತ ಹಾಗೂ ಸಕ್ಕರೆ ಮತ್ತು ಕೊಬ್ಬನ್ನು ನಿಯಂತ್ರಿಸುತ್ತದೆ. ಇದಿಷ್ಟೇ ಅಲ್ಲದೆ, ಇನ್ಸುಲಿನ್ ಸೂಕ್ಷ್ಮತೆ ಮತ್ತು ದೇಹದ ಉಷ್ಣತೆಯನ್ನು ಸಹ ನಿಯಂತ್ರಣ ಮಾಡುತ್ತದೆ. ಇನ್ನು ಗ್ರೀನ್​ ಟೀ ಮತ್ತು ಬ್ಲ್ಯಾಕ್​ ಟೀ ಚಹಾವು ಹೊಟ್ಟೆ, ಅನ್ನನಾಳ, ಬಾಯಿ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಆದರೆ, ಅಧ್ಯಯನಗಳು ಮಿಶ್ರ ಅಥವಾ ಅಸ್ಪಷ್ಟ ಫಲಿತಾಂಶಗಳನ್ನು ತೋರಿಸಿವೆ. ಚಹಾವು ಈ ಗುಣಲಕ್ಷಣಗಳನ್ನು ಹೊಂದಿದ್ದರೂ, ಇದು ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ಸಂಪೂರ್ಣವಾಗಿ ಹೇಳಲಾಗುವುದಿಲ್ಲ.

  See also  ಕುಡಿವ ನೀರಿನಲ್ಲಿ ದುರ್ವಾಸನೆ

  ಕಾಫಿಯು ವಿವಾದಾತ್ಮಕ ಆಯ್ಕೆ
  ಆರೋಗ್ಯದ ವಿಚಾರಕ್ಕೆ ಬಂದಾಗ ಕಾಫಿಗೆ ಸ್ವಲ್ಪ ಮಿಶ್ರ ಪ್ರತಿಕ್ರಿಯೆ ಇದೆ. ಕಾಫಿಯು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಗಮನವನ್ನು ಸುಧಾರಿಸುತ್ತದೆ ಎಂಬುದು ನಿಜವಾಗಿದ್ದರೂ, ಅತಿಯಾದ ಸೇವನೆಯು ನಿದ್ರಾಹೀನತೆ, ಆತಂಕ ಮತ್ತು ಹೆಚ್ಚಿದ ಹೃದಯ ಬಡಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಕಾಫಿಯು ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಇದು ಆಲ್ಝೈಮರ್ ಮತ್ತು ಪಾರ್ಕಿನ್ಸನ್​ನಂತಹ ಕೆಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾರ್ಕಿನ್ಸನ್ ಕಾಯಿಲೆಗೆ ಮುಖ್ಯ ಕಾರಣವೆಂದರೆ ಕಡಿಮೆ ಮಟ್ಟದ ಡೋಪಮೈನ್. ಅಧ್ಯಯನಗಳ ಪ್ರಕಾರ ಕಾಫಿ ಕುಡಿಯುವುದರಿಂದ ಡೋಪಮೈನ್ ತಯಾರಿಸುವ ಮೆದುಳಿನ ಕೋಶಗಳನ್ನು ರಕ್ಷಿಸುತ್ತದೆ.

  ಕಾಫಿಯು ರಕ್ತದಲ್ಲಿನ ಸಕ್ಕರೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ಮೆದುಳಿನ ಕೋಶಗಳನ್ನು ರಕ್ಷಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ, ಕಾಫಿ ಕುಡಿಯುವುದರಿಂದ ಯಕೃತ್ತಿನ ಕಾಯಿಲೆ, ಹೃದ್ರೋಗ, ಕೆಲವು ಮಿದುಳಿನ ಕಾಯಿಲೆಗಳು, ಟೈಪ್ 2 ಡಯಾಬಿಟಿಸ್​ಗೆ ಕಡಿಮೆ ಅಪಾಯವಿದೆ.

  ಎರಡರಲ್ಲಿ ಯಾವುದು ಉತ್ತಮ
  ಹಾಗಾದರೆ ಕಾಫಿ ಅಥವಾ ಚಹಾ ಎರಡರಲ್ಲಿ ಯಾವುದು ಉತ್ತಮ? ಅಧ್ಯಯನಗಳ ಪ್ರಕಾರ ಚಹಾವು ಹೆಚ್ಚು ಸುರಕ್ಷಿತವಾಗಿದೆ. ಕಾಫಿ ಕುಡಿಯಲು ಸುರಕ್ಷಿತವಾಗಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಗ್ರೀನ್​ ಟೀ ಎಪಿಗಲ್ಲೊಕಾಟೆಚಿನ್-3 ಗ್ಯಾಲೇಟ್ ಅಥವಾ ಇಸಿಜಿ ಎಂಬ ಒಂದು ಉತ್ಕರ್ಷಣ ನಿರೋಧಕವನ್ನು ಹೊಂದಿದೆ ಮತ್ತು ಬ್ಲ್ಯಾಕ್​ ಟೀನಲ್ಲಿ ಥೀಫ್ಲಾವಿನ್‌ಗಳು ಅಧಿಕವಾಗಿರುತ್ತದೆ. ಇವೆರಡೂ ದೀರ್ಘಕಾಲದ ಕಾಯಿಲೆಯಿಂದ ನಮ್ಮನ್ನು ರಕ್ಷಿಸಬಹುದು. ಕ್ಲೋರೊಜೆನಿಕ್ ಆಮ್ಲ ಮತ್ತು ಕೆಫೀಕ್​​ ಆಮ್ಲದಂತಹ ಉತ್ಕರ್ಷಣ ನಿರೋಧಕಗಳಲ್ಲಿ ಕಾಫಿ ಅಧಿಕವಾಗಿದೆ. ಆದರೆ ನಿಮ್ಮ ದೇಹವು ಕಡಿಮೆ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿರುವ ಇತರ ಸಂಯುಕ್ತಗಳಾಗಿ ಅದನ್ನು ವಿಭಜಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹಕ್ಕೆ ಚಹಾ ಸಂಯುಕ್ತಗಳು ಮಾಡುವಷ್ಟು ಪರಿಣಾಮ ಮಾಡದಿರಬಹುದು. ಅಂತಿಮವಾಗಿ ಚಹಾ ಮತ್ತು ಕಾಫಿ ನಡುವಿನ ಆಯ್ಕೆಯು ವೈಯಕ್ತಿಕ ಆದ್ಯತೆಯ ವಿಷಯವಾಗಿದೆ. ಪ್ರತಿ ಪಾನೀಯವು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ನೀವು ಕೆಫೀನ್‌ ಆಗಬಾರದಿದ್ದರೆ ಅಥವಾ ನಿದ್ರೆಗೆ ತೊಂದರೆಯಾಗಿದ್ದರೆ ಚಹಾ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಮತ್ತೊಂದೆಡೆ ನೀವು ಕಾಫಿ ರುಚಿಗೆ ಫಿದಾ ಆಗಿದ್ದರೆ, ಅದನ್ನು ಮಿತವಾಗಿ ಸೇವಿಸಿದಾಗ ಅದು ಆರೋಗ್ಯಕರ ಜೀವನಶೈಲಿಯ ಭಾಗವಾಗುತ್ತದೆ. (ಏಜೆನ್ಸೀಸ್​)

  ದುಷ್ಕೃತ್ಯದಿಂದ ನೆಮ್ಮದಿ ಹಾಳು: ಯುಗಾದಿಯಂದೇ ದರ್ಶನ್​ ಬಗ್ಗೆ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಯ್ತು!

  ಟೀಮ್​ ಇಂಡಿಯಾದ ಈ ಬ್ಯಾಟರ್​ ಅಂದ್ರೆ ರಶೀದ್​​ಗೆ ಭಯ! ಹೇಗಪ್ಪಾ ಬೌಲಿಂಗ್ ಮಾಡೋದು ಅನ್ನೋ ಚಿಂತೆಯಂತೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts