ತಾತಯ್ಯನವರ ಕಾಲಜ್ಞಾನ ಎಲ್ಲ ಕಾಲಕ್ಕೂ ಪ್ರಸ್ತುತ: ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್

blank

ಮೈಸೂರು: ಯೋಗಿನಾರೇಯಣ ಯತೀಂದ್ರರು ರಚಿಸಿದ ಕಾಲಜ್ಞಾನದ ಕೃತಿಯಲ್ಲಿ ಎಲ್ಲ ಸಂದೇಶವು ಅಡಗಿದ್ದು, ಅದನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನವಾಗಬೇಕಿದೆ ಎಂದು ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ಗೌರವಾಧ್ಯಕ್ಷ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ತಿಳಿಸಿದರು.
ಸರಸ್ವತಿಪುರಂನ ರಾಧಾಕೃಷ್ಣ ಮಾರ್ಗದಲ್ಲಿರುವ ಶ್ರೀಯೋಗಿ ನಾರೇಯಣ ಬಣಜಿಗ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಅಂದೆ ಯೋಗಿ ನಾರೇಯಣ ಅವರು ತಮ್ಮ ಕಾಲಜ್ಞಾನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕಾರಣಕ್ಕಾಗಿ ಎಂದೆಂದಿಗೂ ಯತೀಂದ್ರರ ಕಾಲಜ್ಞಾನ ಕೃತಿ ಪ್ರಸ್ತುತವಾಗಿದೆ ಎಂದು ಹೇಳಿದರು.
ವಚನಕಾರರಾಗಿ, ಸಮಾಜ ಚಿಂತಕರಾಗಿ ಅವರ ಜೀವನ ಅನುಕರಣೀಯವಾಗಿದೆ. ಇಂದಿನ ಸಮಾಜ ಯಾವುದರ ಹಿಂದೆ ಸಾಗುತ್ತಿದೆ. ಹಣ ಸಂಪಾದನೆ, ರಾಜಕೀಯ ಅಧಿಕಾರಕ್ಕೆ ಯಾವೆಲ್ಲ ಮಟ್ಟಕ್ಕೆ ಮನುಷ್ಯ ಇಳಿಯಬಹುದೆಂಬದನ್ನು ಅಂದೆ ಯತೀಂದ್ರರೂ ಬರೆದಿಟ್ಟಿದ್ದಾರೆ ಎಂದರು.
ಯತೀಂದ್ರರು ಬಳೆ ಮಾರುವ ಸಮಾಜದಲ್ಲಿ ಜನಿಸಿದರು ಅವರು ಕೊಟ್ಟ ಸಮಾಜದ ಸುಧಾರಣಾ ಸಂದೇಶ ಎಲ್ಲರಿಗೂ ಅತ್ಯವಶ್ಯಕ ಆಗಿವೆ. ಸಮಾಜ ಸುಧಾರಕರೆಲ್ಲರನ್ನೂ ಒಂದು ಜಾತಿಗೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ ಎಂದು ಹೇಳಿದರು.
ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಕೆ.ಚಂದ್ರಶೇಖರ್, ಲೆಕ್ಕಪರಿಶೋಧಕ ಡಿ.ನಾಗರಾಜ, ನಿರ್ದೇಶಕರಾದ ಎಚ್.ಕೆ. ಜಗನ್ನಾಥ್, ಗೋವಿಂದರಾಜು, ಎಂ.ವಿ.ವೆಂಕಟೇಶ್, ರಮೇಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚಿನ್ಯಾ ಜಗದೀಶ್, ಉಪನ್ಯಾಸಕ ಹೇಮಕುಮಾರ, ಕಚೇರಿ ವ್ಯವಸ್ಥಾಪಕರಾದ ಎಚ್.ಆರ್.ವೆಂಕಟೇಶ್, ರಘು ಶೆಟ್ಟಿ ಇತರರು ಇದ್ದರು.

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…