ಟಾಟಾ ಎಲ್‌ಪಿಓ 1822 ಬಸ್ ಅನಾವರಣ: ಆಯಾಸರಹಿತ ಪಯಾಣಕ್ಕೆ ಅನುಕೂಲ

bus
Published on

ಬೆಂಗಳೂರು: ದೇಶದ ವಾಣಿಜ್ಯ ಸಾರಿಗೆ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್,ನಗರಗಳ ನಡುವಿನ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ನೂತನ ಮಾದರಿಯ ‘ಟಾಟಾ ಎಲ್‌ಪಿಓ 1822 ಬಸ್ ಚಾಸಿಸ್’ ಅನಾವರಣಗೊಳಿಸಿದೆ.

ದೂರದ ಪ್ರಯಣದ ಅನುಕೂಲಕ್ಕಾಗಿ ರೂಪಿಸಲಾಗಿರುವ ಈ ಬಸ್‌ನ ಕಾರ್ಯಕ್ಷಮತೆ, ಸೌಕರ್ಯ ಮತ್ತು ಕಾರ್ಯಾಚರಣೆಯು ಗಮನ ಸೆಳೆಯುತ್ತಿದ್ದು, ಈ ಮೂಲಕ ಟಾಟಾ ಮೋಟಾರ್ಸ್, ಪ್ರಯಾಣಿಕರಿಗೆ ಅತ್ಯುತ್ತಮ ಸಂಚಾರ ವ್ಯವಸ್ಥೆ ಒದಗಿಸುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಏರ್ ಸಸ್ಪೆನ್ಷನ್, ಕಡಿಮೆ ಕಂಪನ ಮತ್ತು ಶಬ್ದ ಮೂಲಕ ಆಯಾಸರಹಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ. 36 ರಿಂದ 50 ಆಸನ ಇರುವ ಬಸ್‌ನಲ್ಲಿ ಸ್ಲೀಪರ್‌ಗಳಿವೆ.

ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್​​​ನ ಉಪಾಧ್ಯಕ್ಷ ಎಸ್.ಆನಂದ್ ಮಾತನಾಡಿ, ದೇಶದಲ್ಲಿ ಅಂತಾರಾಜ್ಯ ಸಾರಿಗೆ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಬಸ್ ಸಿದ್ಧಪಡಿಸಿದ್ದೇವೆ. ಇದು ಡೀಸೆಲ್ ಇಂಜಿನ್ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. 9 ರಿಂದ 55 ಆಸನವರೆಗಿನ ಡೀಸೆಲ್, ಸಿಎನ್‌ಜಿ, ಎಲ್‌ಎನ್‌ಜಿ ಮತ್ತು ಎಲೆಕ್ಟ್ರಿಕ್ ಆಧಾರಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ನಮ್ಮ ಕಂಪನಿ ಮುಂದಿದೆ. ಈ ವಾಹನಗಳಿಗೆ ‘ಸಂಪೂರ್ಣ ಸೇವಾ 2.0’ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.

ಬಿಡಿಭಾಗ ಸೇರಿ ವಾರ್ಷಿಕ ನಿರ್ವಹಣೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದೇಶಾದ್ಯಂತ 4,500ಕ್ಕೂ ಅಧಿಕ ಮಾರಾಟ ಮತ್ತು ಸೇವಾ ಸಂಪರ್ಕ ಕೇಂದ್ರಗಳ ವಿಶಾಲ ಜಾಲದೊಂದಿಗೆ ದೇಶದ ಸಾರಿಗೆ ವಿಭಾಗವನ್ನು ರೂಪಾಂತರಿಸಲು ಬದ್ಧರಾಗಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net