

MSME : ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕಾ ಸಂಸ್ಥೆಗಳಿಗೆ ಹಣಕಾಸು ನೆರವಿನ ವಿಚಾರವಾಗಿ ಸಿಡ್‌ಬಿ, ಟಾಟಾ ಕ್ಯಾಪಿಟಲ್ ಲಿಮಿಟೆಡ್ ಜತೆಗೆ ‘ಎಮ್‌ಎಸ್‌ಎಮ್‌ಇ ಹಣಕಾಸು ಪಾಲುದಾರಿಕೆ ’ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಿಂದ ಎಮ್‌ಎಸ್‌ಎಮ್‌ಇ ಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಉಪಕರಣಗಳು, ಮೆಷಿನ್‌ಗಳ ಖರೀದಿಗೆ ಹಣಕಾಸು ಸೌಲಭ್ಯ, ಕಾರ್ಯನಿರತ ಬಂಡವಾಳ (ವರ್ಕಿಂಗ್ ಕೆಪಿಟಲ್)ಒಡಿ/ಸಿಸಿ, ವ್ಯಾವಹಾರಿಕ ಸಾಲ ಹಾಗೂ ಆಸ್ತಿಗಳ ಮೇಲೆ ಸಾಲ ಹೀಗೆ ವಿವಿಧ ಮಾರ್ಗಗಳ ಮೂಲಕ ಹಣಕಾಸು ಸೌಲಭ್ಯ ನೀಡುವ ಮೂಲಕ ಎಮ್‌ಎಸ್‌ಎಮ್‌ಇ ಅಭಿವೃದ್ಧಿ ಹಾಗೂ ಏಳಿಗೆಗೆ ಈ ಒಪ್ಪಂದ ಕೇಂದ್ರೀಕೃತವಾಗಿದೆ.
ಮುಂದುವರೆದು ಸಾಲ ಸೌಲಭ್ಯ ವಿಸ್ತರಿಸುವ ಜತೆಗೆ ರಿಸ್ಕ್ ಶೇರಿಂಗ್, ಸಹ -ಸಾಲ, ಜಂಟಿ ಹಣಕಾಸು ವ್ಯವಸ್ಥೆಯನ್ನು ಕೂಡ ಅನ್ವೇಶಿಸಲಿದೆ. ಈ ಒಪ್ಪಂದಕ್ಕೆ ಸಿಡ್‌ಬಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿವೇಕ್ ಕುಮಾರ್ ಮಲ್ಹೋತ್ರಾ, ಟಾಟಾ ಕೆಪಿಟಲ್ ಲಿಮಿಟೆಡ್, ರಿಟೇಲ್ ಫೈನಾನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವಿವೇಕ್ ಚೋಪ್ರಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಹಿ ಹಾಕಿದರು.