

Trump Tariffs: ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಈಗಾಗಲೇ ಭಾರತದ ಮೇಲೆ ಹೆಚ್ಚುವರಿ ಶೇ.50ರಷ್ಟು ಸುಂಕ ವಿಧಿಸಿರುವ ಡೊನಾಲ್ಡ್ ಟ್ರಂಪ್ ಆಡಳಿತ, ಸುಂಕಾಸ್ತ್ರ ಯುಕ್ರೇನ್ಗೆ ಶಾಂತಿ ತಂದುಕೊಡುವ ಸಲುವಾಗಿ ಹಾಕಿರುವುದು. ಇದು ನಿರ್ಣಾಯಕ ಎಂದು ಯುಎಸ್ ಸುಪ್ರೀಂ ಕೋರ್ಟ್ನಲ್ಲಿ ಹೇಳಿರುವುದು ಗಮನಾರ್ಹ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು, ಭಾರತದ ಮೇಲೆ ವಿಧಿಸಿರುವ ಹೆಚ್ಚಿನ ಸುಂಕಗಳನ್ನು ಕಾನೂನುಬಾಹಿರವೆಂದ ಫೆಡರಲ್ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ, ಈ ಸುಂಕಗಳು ಯುಕ್ರೇನ್‌ನಲ್ಲಿ ಶಾಂತಿಗಾಗಿ ನಮ್ಮ ಪ್ರಯತ್ನದ ನಿರ್ಣಾಯಕ ಅಂಶ ಎಂದು ಟ್ರಂಪ್ ಆಡಳಿತ ತಿಳಿಸಿದೆ.
"ಯುಕ್ರೇನ್-ರಷ್ಯಾದ ಯುದ್ಧಕ್ಕೆ ಸಂಬಂಧಿಸಿದಂತೆ ಮೊದಲೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು, ಆ ಯುದ್ಧಪೀಡಿತ ರಾಷ್ಟ್ರದಲ್ಲಿ ಶಾಂತಿಗಾಗಿ ಇದು ಒತ್ತಾಯದ ನಿರ್ಣಾಯಕ ಅಂಶವಾಗಿದೆ. ರಷ್ಯಾದ ಹೆಚ್ಚುವರಿ ಇಂಧನವನ್ನು ಖರೀದಿಸುತ್ತಿರುವ ಭಾರತದ ವಿರುದ್ಧ ಐಇಇಪಿಎ (IEEPA) ಸುಂಕಗಳನ್ನು ಅಧ್ಯಕ್ಷರು ಇತ್ತೀಚೆಗೆ ಆದೇಶಿಸಿದರು" ಎಂದು ಟ್ರಂಪ್ ಆಡಳಿತ ಉಲ್ಲೇಖಿಸಿತು.
ರಷ್ಯಾ ಮೇಲಿರುವ ಕೋಪವನ್ನು ಭಾರತದ ಮೇಲೆ ತೀರಿಸಿಕೊಳ್ಳುತ್ತಿರುವ ಟ್ರಂಪ್, ಇತ್ತೀಚೆಗಷ್ಟೇ ಹೆಚ್ಚುವರಿ ಸುಂಕವನ್ನು ವಿಧಿಸಿದರು. ಇದರ ವಿರುದ್ಧ ಭಾರತ ತೀವ್ರ ಅಸಮಾಧಾನ ಹೊರಹಾಕಿದ್ದು, ಸುಂಕ ಇಳಿಕೆಗೆ ಮೊದಲ ಮಾತುಕತೆಗೆ ಮುಂದಾಯಿತು. ಆದರೆ, ನಯವಾದ ಮಾತಿಗೆ ಬಗ್ಗದ ಟ್ರಂಪ್, ಎಂದಿನಂತೆ ತಮ್ಮ ವಾಗ್ದಾಳಿ, ಸುಂಕ ಸಮರವನ್ನು ಮುಂದುವರಿಸಿದರು,(ಏಜೆನ್ಸೀಸ್).