'ಸಲಗ' ಚಿತ್ರಕ್ಕೆ ಜೈಕಾರ ಹಾಕಿದ ತಮಿಳುನಾಡು ಅಭಿಮಾನಿಗಳು...

salaga pic
Published on

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಹಾಗೂ ಸ್ಯಾಂಡಲ್​​​ವುಡ್​ನಲ್ಲಿಯೇ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸಲಗ ಚಿತ್ರ ಕೂಡ ಒಂದು. ಚಿತ್ರೀಕರಣ ಮುಕ್ತಾಯಗೊಂಡು ವರ್ಷ ಕಳೆದರೂ ಕರೊನಾ ಮಹಾಮಾರಿಯಿಂದ ಬಿಡುಗಡೆಗೆ ತಡೆಯಾಗುತ್ತಿದೆ. ಸದ್ಯ ಚಿತ್ರತಂಡ ಹಲವು ಕಡೆ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದೆ.

ಸಲಗ ಕನ್ನಡ ಚಿತ್ರರಂಗದಲ್ಲಿ ಹಲವಾರು ವಿಶೇಷತೆಗಳಿಗೆ ಸಖತ್ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಜೊತೆಗೆ ಸಲಗ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡಿನಲ್ಲೂ ಕ್ರೇಜ್ ಹುಟ್ಟುಹಾಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲ ದಿನಗಳ ಹಿಂದೆ ನಟ ದುನಿಯಾ ವಿಜಯ್ ತಮಿಳುನಾಡಿಗೆ ಪ್ರವಾಸ ಕೈಗೊಂಡಿದ್ದರು.

ಈ ವಿಚಾರ ತಿಳಿದ ತಮಿಳುನಾಡಿನ ದುನಿಯಾ ವಿಜಯ್ ಅಭಿಮಾನಿಗಳು ವಿಜಯ್ ಅವರನ್ನ ಭೇಟಿ ಮಾಡಿ ಸಲಗ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕೇಳಿದ್ದಾರೆ. ಜೊತೆಗೆ ದುನಿಯಾ ವಿಜಯ್​​ಗೆ ಅದ್ದೂರಿ ಸ್ವಾಗತದ ಜೊತೆ ಸನ್ಮಾನ ಮಾಡಿದ್ದಾರೆ.

ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್, ಕಾಕ್ರೋಜ್ ಸುಧೀರ್ ಸೇರಿದಂತೆ ಟಗರು ಚಿತ್ರದ ಸಾಕಷ್ಟು ಕಲಾವಿದರ ದಂಡೇ ಇದೆ. ಚರಣ್ ರಾಜ್ ಸಲಗ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಸದ್ದು ಮಾಡ್ತಿವೆ. ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದ್ದು, ಕೆ.ಪಿ ಶ್ರೀಕಾಂತ್ ಈ ಸಿನಿಮಾವನ್ನ‌ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ವಿಡಿಯೋ ನೋಡಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net