ತಮಿಳುನಾಡು ಯುವಕನ ಕೈಹಿಡಿದ ಮೆಕ್ಸಿಕನ್ ಯುವತಿ; ಈಕೆಗೆ ಹಳ್ಳಿಯಲ್ಲೇ ಮದುವೆ ಆಗಬೇಕೆಂಬ ಆಸೆ!

Love Marraige
Published on

ತಮಿಳುನಾಡು: ಮೆಕ್ಸಿಕೊ ದೇಶದ ಯುವತಿ ಹಾಗೂ ತಮಿಳುನಾಡಿನ ಯವಕನಿಗೆ ಪ್ರೇಮಾಂಕುರವಾಗಿ, ಇದೀಗ ಈ ಜೋಡಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. ಈ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ತಮಿಳುನಾಡಿನ ಕುಪ್ಪುಚಿಪುದೂರ್ ಪೊಲ್ಲಾಚಿ ನಿವಾಸಿ ಸಾವುತ್ರಿ ರಾಜ್, ಮೆಕ್ಸಿಕೊ ದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಡೇನಿಯಾಲಾ ಎಂಬ ಯುವತಿಯ ಪರಿಚಯವಾಗಿದೆ. ದಿನಕಳೆದಂತೆ ಇಬ್ಬರ ಸ್ನೇಹ ಪ್ರೀತಿಯೆಡೆಗೆ ತಿರುಗಿದೆ. ಓದು ಮುಗಿಯುತ್ತಿದ್ದಂತೆ ಸಾವುತ್ರಿ ರಾಜ್ ಮೆಕ್ಸಿಕೊ ದೇಶದಲ್ಲೇ ಕೆಲಸ ಆರಂಭಿದ್ದ. ಬಳಿಕ ಈ ಜೋಡಿ ಮದುವೆ ಆಗಲು ನಿರ್ಧರಿಸಿದ್ದಾರೆ.

ಭಾರತೀಯ ಸಾಂಪ್ರದಾಯಿಕ ಶೈಲಿಯ ವಿವಾಹಕ್ಕೆ ಮಾರುಹೋಗಿರುವ ವಧು ಡೇನಿಯಲಾ ಹಳ್ಳಿಯಲ್ಲೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಹೀಗಾಗಿ ಈ ಜೋಡಿ ತಮಿಳುನಾಡಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ಸಂಭ್ರಮದಲ್ಲಿ ಇಡೀ ಊರಿನ ಮಂದಿ ಪಾಲ್ಗೊಂಡು ಹಾರೈಸಿದ್ದಾರೆ.

ಅಲ್ಲದೆ ಡೇನಿಯಾಲಳ ತಂದೆ-ತಾಯಿ ಕೂಡ ತಮಿಳುನಾಡಿಗೆ ಬಂದು ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಇಲ್ಲಿನ ಸಂಸ್ಕೃತಿ ಕಂಡು ಮನಸೋತಿದ್ದಾರೆ. ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ಮಗಳ ಮದುವೆಯಲ್ಲಿ ಮಿಂಚಿದ್ದಾರೆ. ಜತೆಗೆ ನೃತ್ಯ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net