VIDEO| ಜಲ್ಲಿಕಟ್ಟು ನೋಡಲು ಬಂದವನಿಗೆ ಗುದ್ದಿದ ಎತ್ತು! ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

jallikattu
Published on

ಚೆನ್ನೈ: ಜಲ್ಲಿಕಟ್ಟು ಕ್ರೀಡೆ ಎಷ್ಟು ಮನರಂಜೆನಯೋ ಅಷ್ಟೇ ಡೇಂಜರಸ್​ ಕೂಡ ಹೌದು. ಜಲ್ಲಿ ಕಟ್ಟು ಕ್ರೀಡೆ ನೋಡಲು ಬಂದ ಯುವಕನೊಬ್ಬನಿಗೆ ಎತ್ತು ನೇರವಾಗಿ ಬಂದು ಗುದ್ದಿದ್ದು, ಯುವಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿಯ ಹಳೆಪೆಟ್ಟೆ ಸಮೀಪದಲ್ಲಿ ಸೋಮವಾರದಂದು ಜಲ್ಲಿಕಟ್ಟು ಕ್ರೀಡೆ ನಡೆಸಲಾಗುತ್ತಿತ್ತು. ಕ್ರೀಡೆಯಲ್ಲಿ ನೂರಾರು ಎತ್ತುಗಳು ಭಾಗಿಯಾಗಿದ್ದವು. ಸುತ್ತ ಮುತ್ತ ಯುವಕರು ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ರಭಸದಿಂದ ಬಂದ ಗೂಳಿಯೊಂದು ಯುವಕನಿಗೆ ಗುದ್ದಿ ಮುಂದೆ ಸಾಗಿದೆ. ಗೂಳಿಯ ಅಡಿಯಾದ ಯುವಕ ಅಲ್ಲೇ ಅಸ್ವಸ್ಥನಾಗಿ ಬಿದ್ದಿದ್ದಾನೆ.

ಗಾಯಾಳುವನ್ನು ತಕ್ಷಣ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮಂಗಳವಾರದಂದು ಮೃತನಾಗಿದ್ದಾನೆ. ಮೃತನು ಅವನಾಪೆಟ್ಟಿ ಗ್ರಾಮದ ನಿವಾಸಿ ಶಕ್ತಿ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೃಷ್ಣಗಿರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net