ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ಗೆ ಕೋವಿಡ್​ ಸೋಂಕು: ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ

MKstalin
Published on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಅವರಿಗೆ ಕೋವಿಡ್​​ ಸೋಂಕು ತಗುಲಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 12ರಂದೇ ಅವರಿಗೆ ಕೋವಿಡ್​ ಪಾಸಿಟಿವ್​ ಇರುವುದು ಖಚಿತವಾದ ಕೂಡಲೇ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗುರುವಾರ ಬೆಳಗ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ತಿಳಿಸಿದೆ. ಈ ಮಧ್ಯೆ ರಾಜ್ಯಪಾಲ ಆರ್​. ಎನ್.​ ರವಿ ಅವರು ಮುಖ್ಯಮಂತ್ರಿಗಳು ಶೀಘ್ರ ಚೇತರಿಸಿಕೊಳ್ಳಲಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಮುನ್ನ ನೀವೊಬ್ಬ ಕ್ರಿಯಾತ್ಮಕ ಹಾಗೂ ಸಾರ್ವಜನಿಕ ನಾಯಕರಾಗಿದ್ದೀರಿ, ಈ ನಡುವೆ ಕೊವಿಡ್​ ತಗುಲಿದ್ದು, ನೀವು ಶೀಘ್ರದಲ್ಲೇ ಗುಣಮುಖರಾಗಬೇಕು. ನಿಮ್ಮ ಚೇತರಿಕೆಗೆ ನಾವು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜ್ಯಪಾಲರು ಬುಧವಾರ ಪತ್ರ ಬರೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಒ ಪನ್ನೀರ್​ ಸೆಲ್ವಂ ಕೂಡ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳು ಶೀಘ್ರಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net