1018 ಊರುಗಳ ಸ್ಪೆಲ್ಲಿಂಗ್​ ಬದಲಾಯಿಸಿದ ಸರ್ಕಾರ, ಇನ್ಮುಂದೆ ಹೇಗಿರತ್ತೆ?

spelling
Published on

ಚೆನ್ನೈ: ಬಹಳ ವರ್ಷಗಳಿಂದ ಕರೆದುಕೊಂಡು ಬಂದಿರುವ ಹೆಸರುಗಳನ್ನು ಬದಲಾವಣೆ ಮಾಡುವುದು ಹೊಸ ವಿಷಯವೇನಲ್ಲ. ಆಯಾ ಪ್ರಾದೇಶಿಕ ಭಾಷೆಯನ್ನು ಗಣನೆಗೆ ತೆಗೆದುಕೊಂಡರೆ, ಇಂಗ್ಲಿಷ್​ನಲ್ಲಿ ಬರೆಯುವ ಸ್ಪೆಲ್ಲಿಂಗ್​ಗಳ ಹೆಸರೇ ಬೇರೆಯಾಗಿರುತ್ತದೆ.

ಇದಾಗಲೇ ಕರ್ನಾಟಕದಲ್ಲಿಯೂ ಕೆಲವೊಂದು ಊರುಗಳ ಹೆಸರುಗಳ ಸ್ಪೆಲ್ಲಿಂಗ್​ಗಳನ್ನು ಬದಲಾವಣೆ ಮಾಡಿಯಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಇತ್ಯಾದಿ ಊರುಗಳ ಸ್ಪೆಲ್ಲಿಂಗ್​ಗಳು ಬದಲಾಗಿ ವರ್ಷಗಳೇ ಸಂದಿವೆ.

ಇದೀಗ ತಮಿಳುನಾಡಿನ ಸರದಿ. ಆದರೆ ಇಲ್ಲಿಯ ವಿಶೇಷ ಎಂದರೆ, ಲಾಕ್​ಡೌನ್​ ಅವಧಿಯಲ್ಲಿ ತಮಿಳುನಾಡಿದ ಬರೋಬ್ಬರಿ 1018 ಊರುಗಳ ಹೆಸರುಗಳ ಸ್ಪೆಲ್ಲಿಂಗ್​ ಬದಲಾಯಿಸಿದೆ ಸರ್ಕಾರ. ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆ ಪ್ರಮುಖ ಸ್ಥಳಗಳಿಗೆ ಸ್ಥಳೀಯರ ಉಚ್ಚಾರಣೆ ರೀತಿಯಲ್ಲಿ ತಮಿಳರಿಗೆ ಅರ್ಥವಾಗುವಂಥ ಸ್ಪೆಲ್ಲಿಂಗ್ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ತಮಿಳುನಾಡಿನ ಎಲ್ಲಾ 37 ಕಂದಾಯ ಜಿಲ್ಲೆಗಳಲ್ಲಿ ಈ ಹೆಸರು ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಮಿಳುನಾಡಿನ ಸಂಸ್ಕೃತಿ ಖಾತೆ ಸಚಿವ ಕೆ ಪಾಂಡ್ಯರಾಜನ್ ಕೆಲ ದಿನಗಳ ಹಿಂದೆ ಹೇಳಿದ್ದರು. ಅದರಂತೆಯೇ ಈಗ ಮಾಡಲಾಗಿದೆ.

ಇಲ್ಲಿಯವರೆಗೆ ಕೊಯಮತ್ತೂರ್​ ಹೆಸರನ್ನು ಇಂಗ್ಲಿಷ್​ನಲ್ಲಿ Coimbatore ಎಂದು ಬರೆಯಲಾಗುತ್ತಿತ್ತು. ಅದು ಇನ್ನುಮುಂದೆ Koyampuththoor ಆಗುತ್ತದೆ. Puducherry ಇನ್ನು ಮುಂದೆ Puthucherry ಎಂದು ಇಂಗ್ಲೀಷ್ ನಲ್ಲಿ ಬರೆಯಬೇಕಾಗುತ್ತದೆ. ಇಲ್ಲಿಯವರೆಗೆ Mylapore ಇದ್ದ ಮೈಲಾಪುರದ ಸ್ಪೆಲ್ಲಿಂಗ್ Mylapore ಬದಲಿಗೆ Mayilaappoor ಆಗಿದೆ. Egmore ಸ್ಟೇಷನ್​ ಇನ್ನು ಎಳಂಬೂರ್ (Ezhumboor) ಸ್ಟೇಷನ್ ಆಗಲಿದೆ. Vellore - Veeloor ಎಂದು ಬದಲಾಗಿದೆ.

ಬದಲಾಗಿರುವ ಊರುಗಳ ಹೆಸರಿನ ಸ್ಪೆಲ್ಲಿಂಗ್​ಗಳು ಹೀಗಿವೆ:

Tondiyarpet - Thandaiyaarpettai : Purasawalkam - Purasaivaakkam; ​Vepery - Vepperi ; Perambur - Peramboor; VOC Nagar - Va.OO.Si. Nagar; Kodungaiyur - Kodungaiyoor; Peravallur - Peravalloor; Siruvallur - Siruvalloor; Konnur - Konnoor; Koyembedu - Koyambedu; Egmore - Ezhumboor; Chintadripet - Chintadaripettai; Triplicane - Thiruvallikkeni;

Mylapore - Mayilaappoor; Thiruvanmiyur - Thiruvanmiyoor; Mambalam - Maambalam; Saidapet - Saithaappettai; Ekkattuthangal - Eekkattuththaangal; Guindy Park - Gindi Poongaa; Thiyagaraya Nagar - Thiyaagaraaya Nagar; Pallikaranai - Pallikkaranai; Okkiam Thorappakkam - Okkiyam Thuraipakkam; Sholinganallur - Solinganalloor; Uthandi - Uththandi;

Mugalivakkam - Mugalivaakkam; Manappakkam - Manappaakkam; Alandur - Aalandhoor; Meenambakkam - Meenambaakkam; Porur - Poroor; Nanganallur - Nangainallur; Adambakkam - Aadhambaakkam; Ambattur - Ambaththoor; Thiruvottriyur - Thiruvotriyoor; Dharmapuri - Tharumapuri; Madavaram - Maathavaram; Dharapuram - Tharaapuram; Coimbatore - Koyampuththoor; Gudalur - Koodaloor;

Puducherry - Puthucherry; Varagur - Varagoor; Talaivasal - Thalaivasal; Kandalur - Kaanthaloor; Thiruverambur - Thiruverumboor; Tuvagudi - Thuvakkudi; Manaparai - Manapparai; Chattrappatti - Chatthirappatti; Pudur - Puthoor; Uthamapalayam - Uthamapaalayam; Vellore - Veeloor; Pernambut - Peranaampattu;

Vatalagundu - Vaththalakundu; hiruvarur - Thiruvaroor; uthupet - Muthuppettai; Tiruthuraipundi - Thirutthurai Poondi; Kudavasal - Kudavaasal; Nidamangalam - Needaamangalam; Orathanadu - Oratthanaadu; Kattur - Kaattoor

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net