ತಮಿಳುನಾಡಿನಲ್ಲಿ ದೇವರ ಮೀನು ಕಂಡು ಮೀನುಗಾರರು ಅಚ್ಚರಿ! ಏನಿದು Doomsday ಫಿಶ್​?

Untitled design - 2025-10-07T130118.363
Published on

Doomsday: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್‌ನ ಮೀನುಗಾರರಿಗೆ ಸೋಮವಾರ 'ಡೂಮ್ಸ್‌ಡೇ ಮೀನು' ಎಂದು ಕರೆಯಲ್ಪಡುವ ಅಪರೂಪದ ಮೀನನ್ನು ಸೆರೆ ಹಿಡಿದಿದ್ದಾರೆ.

ಭಾನುವಾರ ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಮೀನುಗಾರರು ಮನ್ನಾರ್ ಕೊಲ್ಲಿಯಿಂದ ಹಿಂತಿರುಗುತ್ತಿದ್ದಾಗ ಅಸಾಮಾನ್ಯ ಮೀನು ಸಿಕ್ಕಿದ್ದು, ಹಿಡಿದಾಗ ಆಶ್ಚರ್ಯಚಕಿತರಾಗಿದ್ದಾರೆ.

ಅಪರೂಪದ ಮೀನು

ಸಾಮಾನ್ಯವಾಗಿ ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಈ ಕಾರಣಕ್ಕೆ ಇದನ್ನು ಡೂಮ್ಸ್​ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ. ಈ ಹಿಂದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಅಂಥದ್ದೇ ಈ ಡೂಮ್ಸ್​ಡೇ ಮೀನುಗಾರಿಗೆ ಸೆರೆ ಸಿಕ್ಕಿದೆ.

ಈ ಮೀನನ್ನು ವಿಜ್ಞಾನಿಗಳು ಓರ್ ಫಿಶ್ ಎಂದು ಗುರುತಿಸಿದ್ದಾರೆ. ಇದು ಆಳ ಸಮುದ್ರದಲ್ಲಿ ಮೀನುಗಾರಿಕಾ ಬಲೆಗಳಲ್ಲಿ ಅಪರೂಪವಾಗಿ ಸಿಕ್ಕಿಬೀಳುತ್ತದೆ ಎಂಬುದು ವಿಜ್ಞಾನಿಗಳು ಅಭಿಪ್ರಾಯವಾಗಿದೆ.

ಜಪಾನಿನ ಕರಾವಳಿಯ ಮೀನುಗಾರರು ಭೂಕಂಪಗಳು ಅಥವಾ ಇತರ ನೈಸರ್ಗಿಕ ವಿಕೋಪಗಳೊಂದಿಗೆ ಅದರ ನೋಟವನ್ನು ಸಂಯೋಜಿಸುವುದರಿಂದ ಓರ್ ಫಿಶ್ ಅನ್ನು 'ಡೂಮ್ಸ್‌ಡೇ ಮೀನು' ಎಂದು ಕರೆಯಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net