

Tamil Actor Rajesh: ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ನಟ ರಾಜೇಶ್ ಇಂದು (ಮೇ.29) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡಿರುವ ನಟ ರಾಜೇಶ್, ಇಂದು ತಮ್ಮ ಚೆನ್ನೈನ ನಿವಾಸದಲ್ಲಿ ವಿಧಿವಶರಾದರು. ಹಠಾತ್ ಹೃದಯಾಘಾತದಿಂದ ಸಾವಿಗೀಡಾದ ರಾಜೇಶ್, ಮಗಳು ದಿವ್ಯಾ ಮತ್ತು ಮಗ ದೀಪಕ್ ಅವರನ್ನು ಅಗಲಿದ್ದಾರೆ. ನಟನ ಪತ್ನಿ ಜೋನ್ ಸಿಲ್ವಿಯಾ ವನತಿರಾಯರ್ 2012ರಲ್ಲಿ ಕುಟುಂಬವನ್ನು ಅಗಲಿದರು.
ರಕ್ತದೊತ್ತಡದ ಸಮಸ್ಯೆ ಹೆಚ್ಚಿದ ಬೆನ್ನಲ್ಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಜೇಶ್ ನಿಧನರಾದರು. ಈ ಸುದ್ದಿ ತಿಳಿದ ನಟನ ಅಭಿಮಾನಿಗಳು ಮತ್ತು ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).