ಸಜಿಪ ಮೂಡ, ಕಕ್ಕೆಪದವು ಶಾಲೆ ಪ್ರಥಮ : ತಾಲೂಕುಮಟ್ಟದ ಥ್ರೋಬಾಲ್ ಪಂದ್ಯಾಟ

throwball
Published on

ಬಂಟ್ವಾಳ: ತಾಲೂಕುಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟ ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಆಲಾಡಿ ಸಜೀಪಮುನ್ನೂರು ಆಶ್ರಯದಲ್ಲಿ, ಸಜೀಪಮೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆಯಿತು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಜಿ, ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಇಂದಿರಾ, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಮುಖ್ಯಶಿಕ್ಷಕ ಗಣೇಶ್, ಆಲಾಡಿ ಶಾಲಾ ಮುಖ್ಯಶಿಕ್ಷಕಿ ರೋಹಿಣಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಕಬೀರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೊಹಮ್ಮದ್ ಶರೀಫ್, ಗ್ರಾಮ ಪಂಚಾಯಿತಿ ಸದಸ್ಯೆ ಫೌಜಿಯಾ, ಸರಸ್ವತಿ, ಸುಂದರ ಪೂಜಾರಿ ಆಲಾಡಿ, ಶಾಲಾ ದೈಹಿಕ-ಶಿಕ್ಷಕಿ ಸುರೇಖಾ ಪ್ರಸಾದ್ ಉಪಸ್ಥಿತರಿದ್ದರು.

ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸುಭಾಷ್ ನಗರ ಸಜಿಪ ಮೂಡ, ಬಾಲಕಿಯರ ವಿಭಾಗದಲ್ಲಿ ಕಕ್ಕೆಪದವು ಶಾಲಾ ವಿದ್ಯಾರ್ಥಿಗಳು ಗೆದ್ದುಕೊಂಡರು. ಜಿಲ್ಲಾಮಟ್ಟಕ್ಕೆ ಬಾಲಕ-ಬಾಲಕಿಯರ ಥ್ರೋಬಾಲ್ ತಂಡವನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net