ಮಹಿಳೆಯ ಮೇಲಿದೆ ಸಂಸ್ಕಾರ ಪಸರಿಸುವ ಜವಾಬ್ದಾರಿ : ಭವಾನಿ ಹೇಳಿಕೆ

New Project (37)
Published on

ಬೆಳ್ತಂಗಡಿ: ಮಹಿಳೆಯಿಂದ ಸಂಸ್ಕೃತಿ, ಸಂಸ್ಕಾರ ಹುಟ್ಟಿ ಅದು ಎಲ್ಲೆಡೆ ಪಸರಿಸುವ ಜವಾಬ್ದಾರಿ ಇದೆ. ಮಹಿಳೆ ಮನೆಯ ಆರ್ಥಿಕ ಶಕ್ತಿ. ಕೌಟುಂಬಿಕವಾಗಿ ಹಣಕಾಸಿನ ಮುಂಜಾಗ್ರತೆಯನ್ನು ಕಲಿಸಿ ಕೊಟ್ಟವಳು ಹೆಣ್ಣು. ಈ ಮೂಲಕ ಸಮಾಜದೊಂದಿಗಿನ ವ್ಯವಹಾರದ ನಂಟು ಆರಂಭವಾಗುತ್ತದೆ ಎಂದು ಮಂಗಳೂರು ಮಲ್ಲಿಕಟ್ಟೆ ಎಸ್.ಬಿ.ಐ. ಬ್ಯಾಂಕ್‌ನ ಆರ್.ಎ.ಸಿ.ಸಿ. ಮುಖ್ಯವ್ಯವಸ್ಥಾಪಕಿ ಭವಾನಿ ಹೇಳಿದರು.

ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ತಾಲೂಕು, ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದನ್ವಯ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನಡೆದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ಧವಳ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಮಲ್ಲಿಕಾ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಹಿಳೆ ಮನೆಯ ದೇವತೆಯಂತೆ. ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ತರುವಲ್ಲಿ ತಾಯಿ ಪಾತ್ರ ಮಹತ್ವದ್ದು ಎಂದರು.

ದ.ಕ. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ಶಾರದಾ ರೈ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್‌ನ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೇಗೌಡ, ಬೆಳ್ತಂಗಡಿ ಕೇಂದ್ರ ಒಕ್ಕೂಟ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷ ಸೀತಾರಾಮ್ ಆರ್, ಗುರುವಾಯನಕೆರೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ಬಂಗೇರ, ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ, ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜ್ಞಾನ ವಿಕಾಸದ ಪ್ರಾದೇಶಿಕ ಯೋಜನಾಧಿಕಾರಿ ಅಮೃತಾ ಉಪಸ್ಥಿತರಿದ್ದರು.

ಮಧುರಾ ವಸಂತ್ ಸ್ವಾಗತಿಸಿದರು. ಪೂರ್ಣಿಮಾ, ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆ

ಸ್ವಉದ್ಯೋಗ ಮಾಡಿ ಅಭಿವೃದ್ಧಿ ಹೊಂದಿದ ಸಾಧಕ ಮಹಿಳೆಯರಾದ ಯಮುನಾ ಕರಿಮಣೇಲು, ವಿಜಯ ಶೆಟ್ಟಿ ಧರ್ಮಾಡಿ, ಪ್ರಭಾವತಿ ಗುರುವಾಯನಕೆರೆ, ಮೀನಾಕ್ಷಿ ಗುರುವಾಯನಕೆರೆ, ಲಲಿತಾ ತೆಂಕಕಾರಂದೂರು, ಶ್ರೀಲತಾ ಗುರುವಾಯನಕೆರೆ ಅವರನ್ನು ಗೌರವಿಸಲಾಯಿತು. ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆ, ಸ್ವ ಉದ್ಯೋಗ ಮಳಿಗೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ್ಞಾನವಿಕಾಸ ಸದಸ್ಯರ ಕೌಶಲ ಗುರುತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net