

ಕಂದಹಾರ: ಕಂದಹಾರ್‌ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ಕಳ್ಳತನ ಆರೋಪ ಹೊತ್ತಿದ್ದ ಒಂಬತ್ತು ಮಂದಿ ಅಪರಾಧಿಗಳಿಗೆ ತಾಲಿಬಾನ್ ಸಾರ್ವಜನಿಕವಾಗಿ ಥಳಿಸಿದೆ. ಅಪರಾಧಿಗಳನ್ನು 35-39 ಬಾರಿ ಥಳಿಸಲಾಗಿದ್ದು ಈ ಸಮಯದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು ಎನ್ನಲಾಗಿದೆ.
ಅಫ್ಘಾನ್ ಪುನರ್ವಸತಿ ಸಚಿವನಾಗಿರುವ ಮಾಜಿ ನೀತಿ ಸಲಹೆಗಾರ ಮತ್ತು ನಿರಾಶ್ರಿತರ ಸಚಿವ ಶಬ್ನಮ್ ನಸಿಮಿ, ಕಂದಹಾರ್‌ನ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ತಾಲಿಬಾನ್ ನಾಲ್ಕು ಜನರ ಕೈಗಳನ್ನು ಕತ್ತರಿಸಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನ್ಯಾಯಯುತ ವಿಚಾರಣೆ ಮತ್ತು ಸರಿಯಾದ ಪ್ರಕ್ರಿಯೆಯಿಲ್ಲದೆ ಜನರನ್ನು ಹೊಡೆದು, ಕತ್ತರಿಸಲಾಗುತ್ತಿದ್ದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ" ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆಯ ತಜ್ಞರು ಥಳಿಸುವಿಕೆಯನ್ನು ಶಿಕ್ಷೆಯ ರೂಪವಾಗಿ ಬಳಸುವುದನ್ನು ಖಂಡಿಸಿದ್ದು ಎಲ್ಲಾ ರೀತಿಯ ಕಠಿಣ ಶಿಕ್ಷೆಗಳನ್ನು ತಕ್ಷಣವೇ ನಿಲ್ಲಿಸುವಂತೆ ತಾಲಿಬಾನ್‌ಗೆ ಸೂಚನೆ ನೀಡಿದ್ದಾರೆ.