

ಕುಂದಾಪುರ: ಉಪ್ಪಿನಕುದ್ರುನಂತಹ ಸಣ್ಣ ಹಳ್ಳಿಯಲ್ಲಿ ಇಂಥ ಭವ್ಯ ವೇದಿಕೆಯನ್ನು ಡಾ.ಸುಧಾ ಮೂರ್ತಿ ಹಾಗೂ ಡಾ.ಪಿ.ದಯಾನಂದ ಪೈ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವುದು ಅಭಿನಂದನೀಯ. ಪ್ರತಿಯೊಂದು ಕಲೆಯ ಕಲಾವಿದನಿಗೆ ತನ್ನ ಪ್ರತಿಭೆ ಪ್ರದರ್ಶಿಸಲು ಗೊಂಬೆಯಾಟ ಅಕಾಡೆಮಿ ಅವಕಾಶ ನೀಡುತ್ತಿದೆ. ಈ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಎಂ.ರತ್ನಾಕರ ಪೈ ಹೇಳಿದರು.
ಭಾನುವಾರ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು- 2025ರ ಕಾರ್ಯಕ್ರಮದಡಿ ಸತತ 106ನೇ ತಿಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಡುವಾಳ್ ಪ್ರತಿಷ್ಠಾನ ಹೇರೂರು ಅಧ್ಯಕ್ಷ ವೆಂಕಟರಮಣ ಬಿಡುವಾಳ್ ದಂಪತಿ ಹಾಗೂ ಕಿರಿಯ ಪ್ರತಿಭೆ ವೈಭವ್ ಜೆ. ಪೂಜಾರಿ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು.
ಗೊಂಬೆಯಾಟದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್, ಅನಸೂಯಾ ವಿ.ಬಿಡುವಾಳ್, ಯಶೋದಾ ಜೆ.ಪೂಜಾರಿ, ನರಸಿಂಹ ಪೂಜಾರಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಬಿಡುವಾಳ್ ಪ್ರತಿಷ್ಠಾನ ಹೇರೂರು ಬಾಲ ಪ್ರತಿಭೆಗಳಾದ ಅನೂಷಾ ಬಿಡುವಾಳ್, ಅಕ್ಷತಾ ಬಿಡುವಾಳ್, ಪ್ರೀತಿ ಅಡಿಗ, ವೈಷ್ಣವಿ ಬಿಡುವಾಳ್, ಶಾಂಭವಿ ಅಡಿಗ ಮತ್ತು ಪ್ರಣತಿ ಬಿಡುವಾಳ್ ಅವರಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಉಪ್ಪಿನಕುದ್ರು ವೈಭವ್ ಜೆ.ಪೂಜಾರಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ನಿವೃತ್ತ ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿದರು.