ಪ್ರತಿಭೆ ವಿಕಸನಕ್ಕೆ ಪ್ರತಿಭಾ ಕಾರಂಜಿ ವೇದಿಕೆ

chn sep 08 santhebenuru
Published on

ಚನ್ನಗಿರಿ: ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರತಿಭಾ ಕಾರಂಜಿಗಳು ಸಹಕಾರಿಯಾಗಿವೆ ಎಂದು ಗ್ರಾಪಂ ಅಧ್ಯಕ್ಷೆ ಭಾಗ್ಯ ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಕೆಪಿಎಸ್ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂತೇಬೆನ್ನೂರು ಒಂದು ಮತ್ತು ಎರಡು ಕ್ಲಸ್ಟರ್‌ನ ಒಟ್ಟು 32 ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ವಿದ್ಯಾರ್ಥಿಗಳು ಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗಬಾರದು. ಸೋಲು ಗೆಲುವಿನ ಮೂಲ ಎಂಬುದನ್ನು ಅರಿತು ಆಟೋಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೆದಿಕೆರೆ ಗ್ರಾಪಂ ಅಧ್ಯಕ್ಷ ಪಿ.ಎಸ್.ಸಿದ್ದೇಶ್ ಮಾತನಾಡಿ, ಗ್ರಾಮೀಣ ಭಾಗದ ಉಪನಾಯಕನಹಳ್ಳಿ, ಮೆದಿಕೆರೆ ಮತ್ತು ಮಂಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜನೆಗೊಂಡು ನಡೆಯುತ್ತಿರುವ ಪ್ರತಿಭಾ ಕಾರಂಜಿ ಯಶಸ್ವಿಯಾಗಿದೆ. 25 ಶಾಲೆಗಳ ಸುಮಾರು 900 ಮಕ್ಕಳು ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ವಿಶೇಷವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಒ ಜಯಪ್ಪ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಶೃತಿ, ಡಾ.ಶಂಕ್ರಪ್ಪ, ಕುಬೇರಪ್ಪ, ಉಪಪ್ರಾಂಶುಪಾಲ ಜಯಪ್ಪ, ಗೌಡ್ರಸ್ವಾಮಿ, ನಯಾಜ್, ಮುಖ್ಯಶಿಕ್ಷಕ ರಾಜಪ್ಪ, ಯೋಗಿಶ್, ಉಜ್ಜನಪ್ಪ, ಶಂಕರ್‌ಗೌಡ್ರು, ಕುಸುಮಾ, ಶಿವರಾಜ್, ಮಲ್ಲಿಕಾರ್ಜುನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net