ಎಸ್​ಟಿ ಪ್ರಮಾಣ ಪತ್ರ ನೀಡಲು ಆಗ್ರಹ: 150 ಕಿ.ಮೀ. ಪಾದಯಾತ್ರೆ ಅಂತ್ಯ, ಧರಣಿ ಆರಂಭ

0705KLB01
Published on

ಕಲಬುರಗಿ: ತಳವಾರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ರ‍್ಕಾರದ ಇತರ ಎಸ್​ಟಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ತಳವಾರ ಸಮಾಜದಿಂದ ಯಡ್ರಾಮಿ ತಾಲೂಕಿನ ಕಣಮೇಶ್ವರದಿಂದ ಆರಂಭವಾದ ಪಾದಯಾತ್ರೆ ಬುಧವಾರ ಪ್ರಾದೇಶಿಕ ಆಯುಕ್ತರ ಕಚೇರಿಗೆ ತಲುಪಿ, ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಆರಂಭಿಸಲಾಯಿತು.

ಕಣಮೇಶ್ವರದಿಂದ ಮಾ.೨೫ರಂದು ಪಾದಯಾತ್ರೆ ಆರಂಭವಾಗಿದ್ದು, ೧೩ನೇ ದಿನವಾದ ಬುಧವಾರ ನಗರ ಪ್ರವೇಶಿಸಿತು. ರಾಮ ಮಂದಿರ ವೃತ್ತದ ಬಳಿ ಅದ್ದೂರಿ ಸ್ವಾಗತ ನೀಡಲಾಯಿತು. ನಂತರ ಡಿಸಿ ಕಚೇರಿವರೆಗೆ ಬೃಹತ್​ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಕಲ್ಯಾಣ ರ‍್ನಾಟಕದ ಆರು ಜಿಲ್ಲೆಗಳಲ್ಲಿ ತಳವಾರ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ೨೦೨೦ರಲ್ಲಿ ಕೇಂದ್ರದ ಎರಡು ಸದನಗಳ ಒಪ್ಪಿಗೆಯಿಂದ ತಳವಾರ ಸಮುದಾಯ ಎಸ್​ಟಿಗೆ ಸೇರಿಸಲಾಗಿದೆ. ೨೦೨೨ರಲ್ಲಿ ಆಗಿನ ಸಿಎಂ ಬೊಮ್ಮಾಯಿ ಎಸ್​ಟಿಗೆ ಸೇರಿಸಿ, ಆದೇಶಿಸಿದ್ದರು. ಆದರೆ ಕೆಲ ರಾಜರ ಬೆಂಬಲಿತ ಅನ್ಯಾಯಕ್ಕೆ, ಅಧಿಕಾರಿಗಳು ಸಾಥ್​ ನೀಡುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯ ಮನವಿ ಸ್ವೀಕರಿಸಿದರು. ತಳವಾರ ಸಮುದಾಯದಕ್ಕೆ ಕಲ್ಯಾಣ ರ‍್ನಾಟಕದ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹಾಗೂ ಎಸ್​ಟಿಯ ಎಲ್ಲ ಸೌಲಭ್ಯ ನೀಡುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ನಡೆಸಲಾಗುವುದು ಎಂದು ಹೇಳಿದರು.

ತಳವಾರ ಸಮಾಜದ ರಾಜ್ಯಾಧ್ಯಕ್ಷ ಡಾ.ರ‍್ದಾರ ರಾಯಪ್ಪ, ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಮುಖಂಡರಾದ ಸಿದ್ದಣ್ಣ ಐರೋಡಗಿ, ರೇವಣಸಿದ್ದಪ್ಪಗೌಡ ಕಮಾನಮನಿ, ವಸಂತರಾವ ನರಿಬೋಳ, ಭಗವಂತರಾಯ ಬೆಣ್ಣೂರ, ಬಾಪೂಗೌಡ ಮಾಲಿಪಾಟೀಲ್​, ಅಶೋಕ್​ ಕಂಕಿ, ಭೀಮರಾಯ ತಳವಾರ, ಭಾಗೇಶ್​ ಹೊತ್ತಿನಮಡು, ದೇವಿಂದ್ರ ತಳವಾರ ಜೈನಪುರ, ಸಂತೋಷ ಜೈನಪುರ, ಸಿದ್ದು ಯಲಬಾ, ಪ್ರಕಾಶ್​ ಮಂದೆವಾಲ, ಈರಣ್ಣ ಹೊಸಮನಿ, ಪ್ರೇಮ್​ ಕೋಲಿ, ಕರಣ್​ ಬಿರಾದಾರ, ಶರಣು ದೇವರಮನಿ ಶಹಪುರ, ಭಾಗೇಶ್​ ಶಹಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net