ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಿ

16-09-Shiva-2
ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಯಚೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಚೇರಿ ಮುಂದೆ ನಿಗಮದ ಮಹಿಳಾ ನೌಕರರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಪದಾಕಾರಿಗಳಾದ ಯಮುನಾಬಾಯಿ, ಯಾಸ್ಮೀನ್ ಬೇಗಂ, ರಜಾನ್ ಬೇಗಂ, ಎನ್.ಶ್ರೀದೇವಿ, ಸರಸ್ವತಿ, ನರಸಮ್ಮ, ಅನುರಾಧ, ರಾಜೇಶ್ವರಿ, ನಾಜೀರಾ, ಜಯಮ್ಮ, ಅಂಬಮ್ಮ, ಪ್ರಿಯಾಂಕಾ ನಾಯಕ ಇದ್ದರು.
Published on

ರಾಯಚೂರು: ನಗರದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌಜನ್ಯ ನಡೆಸಿದ ಪ್ರಭಾರಿ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಚೇರಿ ಮುಂದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮಹಿಳಾ ನೌಕರರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜೆಸ್ಕಾಂ ಅೀಕ್ಷಕ ಇಂಜಿನಿಯರ್ ಚಂದ್ರಶೇಖರ ದೇಸಾಯಿಗೆ ಮನವಿ ಸಲ್ಲಿಸಿ, ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಐಮನ್ ಅಫ್ರೀನ್ ಲೈಂಗಿಕ ಕಿರುಕುಳ ಕುರಿತು ದೂರು ನೀಡಿ 20 ದಿನಗಳಾದರೂ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ದೂರು ಆಧರಿಸಿ ಮುನಿರಾಬಾದ್ ವೃತ್ತ ಮಟ್ಟದ ಅಕಾರಿಗಳು ಸೆ.8ರಂದು ಸ್ವೀಕರಣ ಕೇಂದ್ರಕ್ಕೆ ಭೇಟಿ ನೀಡಿ ಐಮನ್ ಅಫ್ರೀನ್ ಹೇಳಿಕೆಯನ್ನು ಪಡೆದುಕೊಂಡು ಹೋಗಿದ್ದರು. ಆದರೆ ಇದುವರೆಗೂ ಕ್ರಮಕೈಗೊಂಡಿಲ್ಲ. ಜತೆಗೆ ಆರೋಪ ಎದುರಿಸುತ್ತಿರುವ ಶ್ರೀನಿವಾಸ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇದರಿಂದಾಗಿ ನಿಗಮದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಭದ್ರತೆ ಮತ್ತು ನ್ಯಾಯ ದೊರೆಯುವ ಭರವಸೆ ಕಾಣಿಸುತ್ತಿಲ್ಲ. ಕೂಡಲೇ ದೂರಿನ ಕುರಿತು ಸಮಗ್ರ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಪದಾಕಾರಿಗಳಾದ ಯಮುನಾಬಾಯಿ, ಯಾಸ್ಮೀನ್ ಬೇಗಂ, ರಜಾನ್ ಬೇಗಂ, ಎನ್.ಶ್ರೀದೇವಿ, ಸರಸ್ವತಿ, ನರಸಮ್ಮ, ಅನುರಾಧ, ರಾಜೇಶ್ವರಿ, ನಾಜೀರಾ, ಜಯಮ್ಮ, ಅಂಬಮ್ಮ, ಪ್ರಿಯಾಂಕಾ ನಾಯಕ, ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ, ಪದಾಕಾರಿಗಳಾದ ಹುಲಿರಾಜ್, ವೌನೇಶ ಪತ್ತಾರ, ಜೆ.ಎಲ್.ಗೋಪಿ, ನರಸಪ್ಪ ಮಣ್ಣಿಗೇರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net