

ಕುಂದಾಪುರ: ಸುಸಂಸ್ಕೃತ ನಾಗರಿಕ ಸವಾಜಕ್ಕೆ ಟೈಲರ್‌ಗಳ ಕೊಡುಗೆ ಅನನ್ಯವಾದುದು. ವ್ಯಕ್ತಿಯ ವ್ಯಕ್ತಿತ್ವ ನಿರ್ವಾಣದ ಶಿಲ್ಪಿಗಳು ಟೈಲರ್‌ಗಳು. ಪ್ರಾಚೀನವಾದ ಟೈಲರಿಂಗ್ ವೃತ್ತಿ ಇಂದು ಹಲವು ಆಯಾಮಗಳನ್ನು ಹೊಂದಿ ಅಭಿವೃದ್ಧಿ ಹೊಂದಿದ್ದರೂ ಟೈಲರ್‌ಗಳ ಬದುಕು ಹಸನಾಗಿಲ್ಲ ಎಂದು ಹಿರಿಯ ಸಂ ಪ್ರಚಾರಕ, ಕಟ್ಕೆರೆ ನಂದಗೋಕುಲ ಶಿಶು ಮಂದಿರದ ವ್ಯವಸ್ಥಾಪಕ ಪ್ರೇವಾನಂದ ಶೆಟ್ಟಿ ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್‌ನ ಕೋಟೇಶ್ವರ ವಲಯ ಸಮಿತಿಯ ಮಹಾ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕೋಟೇಶ್ವರ ವಲಯ ಸಮಿತಿ ಅಧ್ಯಕ್ಷ ದಿನೇಶ್ ಕುಲಾಲ್ ಮೊಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವ್ ಆರ್.ಪೂಜಾರಿ, ಜಿಲ್ಲಾ ಸಮಿತಿ ಸದಸ್ಯ ಕೆ.ಎನ್.ರಾವ ಶೇರೆಗಾರ್, ಜಿಲ್ಲಾ ಸಮಿತಿ ಸಂಟನಾ ಕಾರ್ಯದರ್ಶಿ ರಾವೇಂದ್ರ, ಕುಂದಾಪುರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹೇವಾ ಆರ್. ಮತ್ತು ಕ್ಷೇತ್ರ ಸಮಿತಿ ಕೋಶಾಧಿಕಾರಿ ಅರುಣ್ ಖಾರ್ವಿ ಮಾತನಾಡಿದರು.
ಶ್ರೀಧರ್ ಜೋಗಿ ಕೋಟೇಶ್ವರ, ಹೆರಿಯ ಟೈಲರ್ ಜನ್ನಾಡಿ ಮತ್ತು ಅನ್ನಪೂರ್ಣ ಕೋಟೇಶ್ವರ ಅವರನ್ನು ಗೌರವಿಸಲಾಯಿತು.
ಕೋಟೇಶ್ವರ ವಲಯ ಸಮಿತಿ ವಾಜಿ ಅಧ್ಯಕ್ಷ ಸೀತಾರಾಮ ಆಚಾರ್ಯ, ಕುಂದಾಪುರ ನಗರ ಸಮಿತಿಯ ಗೋಪಾಲ್, ಗುತ್ತಿಗೆದಾರ ಸುಧೀರ್ ಕುವಾರ್ ಶೆಟ್ಟಿ, ಕೊಲ್ಲೂರು ದೇವಳ ಸಮಿತಿ ವಾಜಿ ಸದಸ್ಯ ಕೆ.ಪಿ. ಶೇಖರ್, ಎಡಮೊಗೆ ಮಠದ ಪ್ರಧಾನ ಕಾರ್ಯದರ್ಶಿ ಕೇಶವ ಕೋಟೇಶ್ವರ ಉಪಸ್ಥಿತರಿದ್ದರು.
ಶೀಲಾ ಸುರೇಶ್ ಸ್ವಾಗತಿಸಿದರು. ಗೀತಾ ರಮೇಶ್ ವಂದಿಸಿದರು. ಶ್ರೀಧರ ಜೋಗಿ ಮತ್ತು ಪಲ್ಲವಿ ನಿರೂಪಿಸಿದರು. ಜಯಲಕ್ಷ್ಮೀ ಆಚಾರ್ಯ, ಜ್ಯೋತಿ, ರೂಪಾ ಗೋಪಾಲ್, ರೇಖಾ ಕೊರ್ಗಿ, ಸವಿತಾ ಮತ್ತು ವೀಣಾ ಸಹಕರಿಸಿದರು.