ನಾವಳೆಯಲ್ಲಿ ಟೈಲರಿಂಗ್ ತರಬೇತಿ ಉಚಿತ ಶಿಬಿರ

Kkd_sevabharathi
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಸೇವಾಭಾರತಿ ಕನ್ಯಾಡಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ- ಶಿಶಿಲ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 30ನೇ ಟೈಲರಿಂಗ್ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಫೆ. 22ರಂದು ಹತ್ಯಡ್ಕ ಗ್ರಾಮದ ಅಂಗನವಾಡಿ ಕೇಂದ್ರ ನಾವಳೆ- ಪಾಲೆಂಜದಲ್ಲಿ ನಡೆಯಿತು.

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಿಲಿಕಬೆ ಒಂದು ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಸ್ವರ್ಣಗೌರಿ ಟೈಲರಿಂಗ್ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಟೈಲರಿಂಗ್ ತರಬೇತುದಾರರಾದ ವಿಮಲಾ ಅರ್ ಶೆಟ್ಟಿಯವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್ ಕುಮಾರ್, ಅರಿಕೆಗುಡ್ಡೆ ವನದುರ್ಗ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ನೀತಾ ರಾಧೇಶ್ ಆಚಾರ್ಯ ಮತ್ತು ಅರಸಿನಮಕ್ಕಿ ಆಶಾ ಕಾರ್ಯಕರ್ತೆ ಕವಿತಾ ಉಪಸ್ಥಿತರಿದ್ದರು. ಒಟ್ಟು 23 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಟೈಲರಿಂಗ್ ಶಿಬಿರಾರ್ಥಿ ದಿವ್ಯಜ್ಯೋತಿ ಸ್ವಾಗತಿಸಿ, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ಟೈಲರಿಂಗ್ ಶಿಬಿರಾರ್ಥಿ ಕವಿತಾ ಧನ್ಯವಾದವಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net