ಜಗಳೂರು: ದೇಶದಲ್ಲಿ ಹೆಣ್ಣಿಗಿಂತ ಹೆಚ್ಚಾಗಿ ಗಂಡು ಮಕ್ಕಳ ಮೇಲೆ ದೈಹಿಕ, ಮಾನಸಿಕ ಮತ್ತು ಪ್ರಚೋದನಕಾರಿ ದೌರ್ಜನ್ಯಗಳು ನಡೆಯುತ್ತಿವೆ ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಕಳವಳ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ದಾವಣಗೆರೆ ಡಾನ್ಬಾಸ್ಕೋ ಬಾಲಕಾರ್ವಿುಕರ ಮಿಷನ್, ಬೆಂಗಳೂರು ಬ್ರೆಡ್ಸ್ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಗಳೂರು ಮಕ್ಕಳ ಹಕ್ಕುಗಳ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ 54 ಅನುಚ್ಛೇದಗಳಿವೆ. ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸದ ಹಕ್ಕು, ಭಾಗವಹಿಸುವ ಹಕ್ಕು ಎಂಬುದಾಗಿ ಗುರುತಿಸಲಾಗಿದೆ ಎಂದರು.
ಮಕ್ಕಳ ಹಕ್ಕುಗಳಿಗಾಗಿ ಸರ್ಕಾರ ಬಹಳಷ್ಟು ಚಟುವಟಿಕೆಗಳಿಗೆ ಅನುದಾನ ನೀಡುತ್ತಿದೆ. ಹೆಣ್ಣು ಮಕ್ಕಳಿಗೆ ಶೇ.47ರಷ್ಟು, ಪುರುಷರ ಮೇಲೆ ಶೇ. 54 ರಷ್ಟು ದೌರ್ಜನ್ಯ ನಡೆಯುತ್ತಿರುವುದು ಗಣತಿಯಿಂದ ತಿಳಿದು ಬಂದಿದೆ. ಎಂದರು.
ತಾಪಂ ಇಒ ಕೆಂಚಪ್ಪ ಮಾತನಾಡಿ, ಹೆಣ್ಣುಮಕ್ಕಳ ಸುರಕ್ಷತೆ ನಮ್ಮ ಹೊಣೆಯಾಗಿದೆ. ನರೇಗಾ ಸೇರಿ ಇತರೆ ಅನುದಾನದಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ 76 ಶೌಚಗೃಹ, ಆಟದ ಮೈದಾನ, ಕಾಂಪೌಂಡ್, ಹೈಟೆಕ್ ಶೌಚಗೃಹ ನಿರ್ವಿುಸಲಾಗುವುದು. ಆಯ್ದ ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಡೆಸ್ಕ್ ವಿತರಣೆ ಮಾಡಲಾಗುವುದು ಎಂದರು.
ಜ್ಞಾನತರಂಗಿಣಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪಿ.ಎಸ್. ಅರವಿಂದನ್, ಡಾನ್ಬಾಸ್ಕೋ ಸಂಸ್ಥೆ ನಿರ್ದೇಶಕ ಫಾ. ರೆಜಿ ಜೇಕಪ್, ಬಿಆರ್ಸಿ ಬಸವರಾಜಪ್ಪ, ಸಿಆರ್ಪಿ ನಾಗಪ್ಪ, ಸಿಎಸ್ ಯೋಜನೆ ಸಂಯೋಜಕ ಆರ್. ದುರುಗಪ್ಪ, ಡಾನ್ಬಾಸ್ಕೋ ಚೈಲ್ಡ್ ರೈಟ್ಸ್ ಆಕ್ಟಿವಿಸ್ಟ್ ಸಂಯೋಜಕ ಬಿ. ಮಂಜಪ್ಪ, ಮಕ್ಕಳ ಹಕ್ಕುಗಳ ಕ್ಲಬ್ ಸದಸ್ಯೆ ಸರಸ್ವತಿ ಇತರರಿದ್ದರು.