ಇನ್ನು ಮುಂದೆ ಈ ರೀತಿಯ ಪಾತ್ರಗಳಲ್ಲಿ ನಟಿಸುವುದಿಲ್ಲ; ನಟಿ ತಬು ಕೊಟ್ಟ ಸ್ಪಷ್ಟನೆ ಏನು?

Untitled-design-19
Published on

ಮುಂಬೈ: ಬಾಲಿವುಡ್​​​ನಲ್ಲಿ ಹಮ್ ನೌಜವಾನ್‌ ಸಿನಿಮಾ 1985ರಲ್ಲಿ ಬಿಡುಗಡೆಗೊಂಡಿತು. ಈ ಸಿನಿಮಾದ ಮೂಲಕ ಬಾಲಕಲಾವಿದೆಯಾಗಿ ನಟನೆಗೆ ಪದಾರ್ಪಣೆ ಮಾಡಿದ ನಟಿ ತಬು ಅವರು ತೆಲುಗಿನ ಕೂಲಿ ನಂ.1 ಸಿನಿಮಾದ ಮೂಲಕ ಪೂರ್ಣಪ್ರಮಾಣ ನಾಯಕಿಯಾಗಿ ಎಂಟ್ರಿ ಕೊಟ್ಟರು. ಸುಮಾರು 30 ವರ್ಷಗಳ ಹಿಂದೆ 1994ರಲ್ಲಿ ಬಿಡುಗಡೆಯಾದ ವಿಜಯಪಥ್​​​ ಚಿತ್ರ ಅವರ ಮೊದಲ ಹಿಂದಿ ಚಿತ್ರವಾಗಿದೆ.

ಈ ಚಿತ್ರದಲ್ಲಿ, ಅವರು ಅಜಯ್ ದೇವಗನ್ ಅವರೊಂದಿಗೆ ಜೋಡಿಯಾಗಿದ್ದರು. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ತುಂಬಾ ಮೆಚ್ಚುಗೆ ಪಡೆದಿತ್ತು. ಇದೀಗ ಮತ್ತೆ ಅದೇ ಜೋಡಿಯು ತಮ್ಮ ಮುಂದಿನ ಸಿನಿಮಾ ಸಿನಿಮಾ ‘ಔರಾನ್ ಮೇ ಕಹಾನ್ ದಮ್ ಥಾ’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಟ ಅಜಯ್ ದೇವಗನ್ ಅವರೊಂದಿಗೆ ತಬು ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ನಟಿ ತಬು ಚಿತ್ರರಂಗದಲ್ಲಿನ ಡಿ-ಏಜಿಂಗ್​ ಬಗ್ಗೆ ಮಾತನಾಡಿದ್ದಾರೆ. ಇನ್ನು ಮುಂದೆ ಸಿನಿಮಾದಲ್ಲಿ 30 ವರ್ಷದ ಯುವತಿಯ ಪಾತ್ರವನ್ನು ಮಾಡಲು ಇಚ್ಛಿಸುವುದಿಲ್ಲ. ತನಗೆ ಅಂತಹ ಪಾತ್ರದ ಆಫರ್​ ಬಂದರೆ ನಾನು ಮಾಡೋದಿಲ್ಲ ಎಂದು ಹೇಳಿದ್ದಾರೆ. ತನ್ನ ವಯಸ್ಸನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಈಗ ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಔರ್ ಮೇ ಕಹಾನ್ ದಮ್ ಥಾ' ಸಿನಿಮಾ 23 ವರ್ಷಗಳ ನಂತರ ಮತ್ತೆ ಭೇಟಿಯಾಗುವ ಪ್ರೇಮಿಗಳ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ಮಾಡಲು ನನಗೆ ಖುಷಿಯಾಯಿತು. ನೋಡುಗರಿಗೆ ನನ್ನ ನಿಜವಾದ ವಯಸ್ಸು ತಿಳಿದಿರುವಾಗ ಕಿರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದು ನಟಿ ಪ್ರಾಮಾಣಿಕವಾಗಿ ಒಪ್ಪಿಕೊಂಡರು.

ಕೆಲವೊಮ್ಮೆ ಸಿನಿಮಾದಲ್ಲಿ ನಮ್ಮ ವಯಸ್ಸಿಗಿಂತ ಕಿರಿಯ ಪಾತ್ರದಲ್ಲಿ ಆಡಂಬರದಿಂದ ಕಾಣಿಸಿಕೊಳ್ಳಬೇಕಾಗುತ್ತದೆ ಎಂಬುದು ಅವರ ನಂಬಿಕೆ. ಕಿರಿಯ ಪಾತ್ರಗಳನ್ನು ನಿರ್ವಹಿಸುವ ಹಿರಿಯ ನಟರ ಪಾತ್ರಗಳು ಚಲನಚಿತ್ರ ಮತ್ತು ಅದರ ಪರಿಕಲ್ಪನೆಯನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ಇದು ಚೆನ್ನಾಗಿ ಕೆಲಸ ಮಾಡಬಹುದು. ಆದರೆ ಇದು ತನಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net