

ತಮಿಳುನಾಡು: ( Tablet Gets Stuck In Kid Throat ) 4 ವರ್ಷದ ಬಾಲಕನ ಗಂಟಲಿನಲ್ಲಿ ಮಾತ್ರೆ ಸಿಲುಕಿಕೊಂಡು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ತಿರುವಲ್ಲೂರು ಜಿಲ್ಲೆಯ ತಿರುತ್ತಣಿಯಲ್ಲಿ ನಡೆದಿದೆ.
ಯೋಗಿತ್ ಮೃತ ಬಾಲಕ. ಜ್ವರ ಇರುವುದಕ್ಕೆ ವೈದ್ಯರು ನೀಡಿದ ಮಾತ್ರೆ ನೀಡಿದ್ದರು. ಇದು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗದೆ ಸಾವನ್ನೊಪ್ಪಿದ್ದಾನೆ.
ತಿರುವಲ್ಲೂರು ಜಿಲ್ಲೆಯ ತಿರುತ್ತಣಿ ಒಕ್ಕೂಟದಲ್ಲಿ ಪಿ.ಆರ್. ಪಲ್ಲಿ ಎಂಬ ಗ್ರಾಮದ ನಿವಾಸಿಗಳಾಗಿರುವ ವೇಲು ತನ್ನ ಪತ್ನಿ ಶಶಿಕಲಾ ದಂಪತಿ ಇಬ್ಬರೂ ನೇಯ್ಗೆ ಕೆಲಸ ಮಾಡುತ್ತಾರೆ. ಇವರ ನಾಲ್ಕು ವರ್ಷದ ಬಾಲಕ ಯೋಗಿತ್ಗೆ ಜ್ವರ ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಔಷಧಿ ಮತ್ತು ಮಾತ್ರೆಗಳನ್ನು ಬರೆದಿದ್ದಾರೆ.
ಪೋಷಕರು ವೈದ್ಯರ ನೀಡಿದ್ದ ಮಾತ್ರೆಗಳನ್ನು ಯೋಗಿತ್ಗೆ ನೀಡಿದ್ದಾರೆ. ಆದರೆ ಮಾತ್ರೆ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಉಸಿರುಗಟ್ಟಿಕೊಂಡಿದೆ. ಪೋಷಕರು ತಕ್ಷಣ ಮಗುವನ್ನು ಎತ್ತಿಕೊಂಡು ತಿರುತ್ತಣಿ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಬಾಲಕ ಯೋಗಿತ್ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಗನ್ನು ಕಳೆದುಕೊಂಡ ಕುಟುಂಬಸ್ಥರರು ಕಣ್ಣೀರು ಹಾಕಿದ್ದಾರೆ. ತಿರುತ್ತಣಿ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ವಿಷಯದಲ್ಲಿ ಪೋಷಕರು ಯಾವಾಗಲೂ ಜಾಗರೂಕರಾಗಿರಬೇಕು. ಮಕ್ಕಳಿಗೆ ಔಷಧಿ ನೀಡುವಾಗ, ವಿಶೇಷವಾಗಿ ಆರೋಗ್ಯ ಸಮಸ್ಯೆಗಳಿಗೆ ಪೋಷಕರು ಹಲವಾರು ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಮಕ್ಕಳ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮಕ್ಕಳಿಗೆ ಮಾತ್ರೆ ನೀಡುವಾಗ ಹಾಲು, ರಸ ಅಥವಾ ಬೇರೆ ಯಾವುದಾದರೂ ವಸ್ತುವಿನೊಂದಿಗೆ ಬೆರೆಸಿ ಕರಗಿಸಿ ನೀಡಬಹುದು.
ಮಾತ್ರೆಯನ್ನು ಎರಡು ಭಾಗಗಳಾಗಿ ವಿಂಗಡಿಸಿ ನೀಡಬೇಕು . ಮಗು ಟ್ಯಾಬ್ಲೆಟ್ ಅನ್ನು ಸಂಪೂರ್ಣವಾಗಿ ನುಂಗುವಂತೆ ಪೋಷಕರು ಖಚಿತಪಡಿಸಿಕೊಳ್ಳಬೇಕು. ಕೆಲವೊಮ್ಮೆ ಅದು ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು.