

ನ್ಯೂಯಾರ್ಕ್: ಸ್ಫೋಟಕ ಬ್ಯಾಟರ್ಗಳನ್ನು ಒಳಗೊಂಡ ದಕ್ಷಿಣ ಆಫ್ರಿಕಾ ಮತ್ತು ವೈವಿಧ್ಯತೆಯಿಂದ ಕೂಡಿರುವ ಬೌಲಿಂಗ್ ವಿಭಾಗವನ್ನು ಹೊಂದಿರುವ ಶ್ರೀಲಂಕಾ ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ರಾತ್ರಿ (ಸ್ಥಳಿಯ ಕಾಲಮಾನ ಸೋಮವಾರ ಬೆಳಗ್ಗೆ) ಮುಖಾಮುಖಿ ಆಗಲಿವೆ. ಡಿ ಗುಂಪಿನ ಈ ಮೊದಲ ಕಾದಾಟದಲ್ಲಿ ಶುಭಾರಂಭ ಕಾಣಲು ಉಭಯ ತಂಡಗಳಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ನಿರೀೆ ಇದೆ.
ನೆದರ್ಲೆಂಡ್, ಬಾಂಗ್ಲಾದೇಶ ಮತ್ತು ನೇಪಾಳ ಡಿ ಗುಂಪಿನ ಇತರ ಮೂರು ತಂಡಗಳಾಗಿದ್ದು, ದ. ಆಫ್ರಿಕಾ-ಶ್ರೀಲಂಕಾ ತಂಡಗಳೇ ಸೂಪರ್&8 ಹಂತಕ್ಕೇರುವ ನೆಚ್ಚಿನ ತಂಡಗಳಾಗಿವೆ. ಹೀಗಾಗಿ ಈ ಪಂದ್ಯ ಗುಂಪಿನ ಅಗ್ರಸ್ಥಾನಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಗಳಿವೆ. ಐಸಿಸಿ ವಿಶ್ವಕಪ್ಗಳಲ್ಲಿ ಹರಿಣಗಳಿಗೆ ಇದುವರೆಗೆ ಪ್ರಶಸ್ತಿ ಕೈಗೆಟುಕಿಲ್ಲ. ಇದರ ನಡುವೆ ಟಿ20 ಆವೃತ್ತಿಯ ವಿಶ್ವಕಪ್ನಲ್ಲಿ ದಣ ಆಫ್ರಿಕಾ ಸಾಧಾರಣ ಎನಿಸುವಂಥ ದಾಖಲೆ ಹೊಂದಿದೆ. 2 ಬಾರಿ ಸೆಮಿಫೈನಲ್ಗೇರಿದ್ದೇ ಶ್ರೇಷ್ಠ ಸಾಧನೆಯಾಗಿದ್ದು, ಕಳೆದ 3 ಆವೃತ್ತಿಗಳಲ್ಲಿ ನಾಕೌಟ್ ಹಂತಕ್ಕೂ ಪ್ರವೇಶ ಪಡೆದಿಲ್ಲ. ಮತ್ತೊಂದೆಡೆ ಶ್ರೀಲಂಕಾ ಮೊದಲ 5 ಆವೃತ್ತಿಗಳಲ್ಲಿ 3 ಬಾರಿ ಫೈನಲ್ಗೇರಿತ್ತು. ಆದರೆ 2014ರಲ್ಲಿ ಪ್ರಶಸ್ತಿ ಗೆದ್ದ ನಂತರದಲ್ಲಿ ಲಂಕಾ ನಾಕೌಟ್ ಹಂತಕ್ಕೇರುವಲ್ಲಿ ಯಶ ಕಂಡಿಲ್ಲ. ಹೀಗಾಗಿ ಉಭಯ ತಂಡಗಳು ಈ ಬಾರಿ ತಮ್ಮದೇ ಆದ ಛಾಪು ಮೂಡಿಸುವ ಹಂಬಲದಲ್ಲಿವೆ.
ಆಫ್ರಿಕಾ ಬ್ಯಾಟಿಂಗ್-ಲಂಕಾ ಬೌಲಿಂಗ್
ನಾಯಕ ಏಡನ್ ಮಾರ್ಕ್ರಮ್, ಕ್ವಿಂಟನ್ ಡಿಕಾಕ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್ರಂಥ ಬ್ಯಾಟರ್ಗಳು ದಣ ಆಫ್ರಿಕಾದ ಪ್ರಮುಖ ಬಲವಾಗಿದ್ದಾರೆ. ಐಪಿಎಲ್ನಲ್ಲೂ ಬಿರುಸಿನ ಆಟದೊಂದಿಗೆ ಮಿಂಚಿರುವ ಈ ಬ್ಯಾಟರ್ಗಳಿಗೆ ಲಂಕಾದ ಸ್ಪಿನ್ನರ್ಗಳಾದ ವಾನಿಂದು ಹಸರಂಗ, ಮಹೀಶ್ ತೀಕ್ಷಣ, ವೇಗಿಗಳಾದ ಮಥೀಶ ಪಥಿರಣ ಮತ್ತು ದಿಲ್ಶಾನ್ ಮಧುಶಂಕ ಸವಾಲಾಗಲಿದ್ದಾರೆ. ನ್ಯೂಯಾರ್ಕ್ನಲ್ಲಿ ನಡೆದ ಭಾರತ-ಬಾಂಗ್ಲಾ ಅಭ್ಯಾಸ ಪಂದ್ಯ ಗಮನಿಸಿದಾಗ, ನಾಸೌ ಕ್ರೀಡಾಂಗಣದ ಪಿಚ್ ಬೌಲರ್ಗಳಿಗೆ ಸಹಕರಿಸುವ ನಿರೀೆ ಇದೆ.
ಇಂದಿನ ಪಂದ್ಯಗಳು
ನಮೀಬಿಯಾ-ಓಮನ್
ಗುಂಪು: ಬಿ
ಆರಂಭ: ಬೆಳಗ್ಗೆ 6
ಎಲ್ಲಿ: ಬಾರ್ಬಡೋಸ್
ಶ್ರೀಲಂಕಾ-ದಕ್ಷಿಣ ಆಫ್ರಿಕಾ
ಗುಂಪು: ಡಿ
ಆರಂಭ: ರಾತ್ರಿ 8
ಎಲ್ಲಿ: ನ್ಯೂಯಾರ್ಕ್
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್