

ನ್ಯೂಯಾರ್ಕ್: ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ನಾಲ್ಕನೇ ಸುತ್ತಿನಲ್ಲಿ ಆಘಾತ ಎದುರಿಸಿದ್ದಾರೆ. ಇದರಿಂದ ಸ್ವಿಯಾಟೆಕ್ ವಿಶ್ವ ನಂ. 1 ಪಟ್ಟವನ್ನೂ ಕಳೆದುಕೊಂಡಿದ್ದಾರೆ. ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಪೋಲೆಂಡ್ ತಾರೆ ಸ್ವಿಯಾಟೆಕ್ ಭಾನುವಾರ ರಾತ್ರಿ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 6-3, 3-6,1-6 ರಿಂದ ಜೆಲೆನಾ ಒಸ್ತಾಪೆಂಕೊ ಎದುರು ಆಘಾತಕಾರಿ ಸೋಲು ಅನುಭವಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಪುಟಿದೆದ್ದ 2017ರ ್ರೆಂಚ್ ಓಪನ್ ಚಾಂಪಿಯನ್ ಒಸ್ತಾಪೆಂಕೊ ಕ್ವಾರ್ಟರ್‌ೈನಲ್‌ಗೇರಿದರು. ಈ ಸೋಲಿನಿಂದ 22 ವರ್ಷದ ಸ್ವಿಯಾಟೆಕ್ 75 ವಾರಗಳ ಬಳಿಕ ವಿಶ್ವ ನಂ.1 ಪಟ್ಟವನ್ನೂ ಕಳೆದುಕೊಂಡಿದ್ದು, ಮುಂದಿನ ವಾರ ಬಿಡುಗಡೆಯಾಗಲಿರುವ ಪರಿಷ್ಕೃತ ಡಬ್ಲುೃಟಿಎ ರ‌್ಯಾಂಕಿಂಗ್‌ನಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅಗ್ರಸ್ಥಾನಕ್ಕೇರಲಿದ್ದಾರೆ.
ನಿವೃತ್ತಿ ಹಿಂಪಡೆದು ಪುನರಾಗಮನ ಕಂಡಿದ್ದ ಮಾಜಿ ವಿಶ್ವ ನಂ. 1 ಕ್ಯಾರೊಲಿನ್ ವೋಜ್ನಿಯಾಕಿ ಓಟವೂ 4ನೇ ಸುತ್ತಿನಲ್ಲಿ ಕೊನೆಗೊಂಡಿದೆ. ಉಳಿದಂತೆ ಆತಿಥೇಯ ತಾರೆಯರಾದ ಟೇಲರ್ ಫ್ರಿಟ್ಜ್, ಬೆನ್ ಶೆಲ್ಟನ್, ಮಹಿಳೆಯರ ವಿಭಾಗದಲ್ಲಿ ತಾರೆಯರಾದ ಕ್ಯಾರೊಲಿನಾ ಮುಚೋವಾ, ಜೆಲೆನಾ ಒಸ್ತಾಪೆಂಕೊ, ರೊಮೇನಿಯಾದ ಸೊರನಾ ಕ್ರಿಸ್ಟಿಯಾ, ಯುವತಾರೆ ಕೋಕೋ ಗ್ೌ ಎಂಟರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯ ೇವರಿಟ್ ಕೋಕೋ ಗ್ೌ 6-3, 3-6, 6-1ರಿಂದ ಕ್ಯಾರೊಲಿನ್ ವೋಜ್ನಿಯಾಕಿ ಎದುರು ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಒಸ್ತಾಪೆಂಕೊ-ಗ್ೌ ಮುಖಾಮುಖಿಯಾಗಲಿದ್ದಾರೆ.
ಮುಚೋವಾ, ಸೊರನಾ ಉಪಾಂತ್ಯಕ್ಕೆ
10ನೇ ಶ್ರೇಯಾಂಕಿತೆ ಕ್ಯಾರೊಲಿನಾ ಮುಚೋವಾ 6-3, 5-7,6-1 ರಿಂದ ಚೀನಾದ ವಾಂಗ್ ಕ್ಸಿನ್ಯು ಅವರನ್ನು ಮಣಿಸಿದರೆ, 15ನೇ ಶ್ರೇಯಾಂಕಿತೆ ಬೆಲಿಂಡಾ ಬೆನ್ಸಿಕ್ 6-3, 6-3 ರಿಂದ 30ನೇ ಶ್ರೇಯಾಂಕಿತೆ ಸೊರನಾ ಸಿರ್ಸ್ಟಿಯಾ ಎದುರು ಪರಾಭವ ಹೊಂದಿದರು. 14 ವರ್ಷಗಳ ಬಳಿಕ ಕ್ರಿಸ್ಟಿಯಾ ಯುಎಸ್ ಓಪನ್‌ನ ಉಪಾಂತ್ಯಕ್ಕೆ ಲಗ್ಗೆಯಿಟ್ಟರು. 2009ರಲ್ಲಿ ಕೊನೆಯದಾಗಿ ಅರ್ಹತೆ ಪಡೆದಿದ್ದರು. ಮುಚೋವಾ-ಸೊರನಾ ನಡುವಿನ ವಿಜೇತರು ಸೆಮೀಸ್‌ಗೇರಲಿದ್ದಾರೆ.