

ಬೆಳ್ವೆ: ಮಣಿಪಾಲ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಸೈನ್ಸ್, ಮಾಹೆ ಮಣಿಪಾಲ ಹಾಗೂ ಡಿಕಿನ್ ಯೂನಿವರ್ಸಿಟಿ ಆಸ್ಟ್ರೇಲಿಯಾದ ಸಂಶೋಧನಾ ವಿದ್ಯಾರ್ಥಿನಿ ಸ್ವಾತಿ ಪ್ರಭು ಬೆಳ್ವೆ ಮಂಡಿಸಿದ ಸಂಶೋಧನಾ ಪ್ರಬಂಧ ‘ಆಟೋಮೇಟೆಡ್ ಡಿಟೆಕ್ಷನ್ ಆಫ್ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಫ್ರಮ್ ಹಿಸ್ಟೊ ಪೆತೋಲಾಜಿಕಲ್ ಇಮೇಜಸ್’ಗೆ ಮಹಾಪ್ರಬಂಧಕ್ಕೆ ಪಿಎಚ್.ಡಿ ನೀಡಿ ಗೌರವಿಸಿದೆ. ಮಣಿಪಾಲ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಸೈನ್ಸ್ ನಿರ್ದೇಶಕಿ ಪ್ರೊ.ಕೀರ್ತನಾ ಪ್ರಸಾದ್ ಹಾಗೂ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಡೀಕಿನ್ ಯೂನಿವರ್ಸಿಟಿ ಸಹ ಪ್ರಾಧ್ಯಾಪಕ ಪ್ರೊ.ತೋಂಗ್‌ಹಾಂಗ್ ಮಾರ್ಗದರ್ಶನ ನೀಡಿದ್ದರು. ಅವರು ಬೆಳ್ವೆ ನಿವೃತ್ತ ಪೋಸ್ಟ್ ಮಾಸ್ಟರ್ ಮೋಹನದಾಸ ಪ್ರಭು ಹಾಗೂ ಜಯಶ್ರೀ ದಂಪತಿ ಪುತ್ರಿ, ಮಣಿಪಾಲ ರಾಜೀವ ನಗರ ಡಾ.ಮಹೇಶ್ ಪ್ರಭು ಪತ್ನಿ.