More

    ಆಪ್​ನಿಂದ ರಾಜ್ಯಸಭೆಗೆ ಸ್ವಾತಿ ಮಲಿವಾಲ್: ಜೈಲ್​ನಿಂದಲೇ ಸ್ಪರ್ಧಿಸುವ ಆಮ್ ​ಆದ್ಮಿ ನಾಯಕ ಯಾರು?

    ನವದೆಹಲಿ: ಆಪ್​ನಿಂದ ರಾಜ್ಯಸಭೆಗೆ ಕಳೂಹಿಸಲು ಎರಡನೇ ಅವಧಿಗೆ ಸಂಜಯ್ ಸಿಂಗ್ ಮತ್ತು ಎನ್‌.ಡಿ.ಗುಪ್ತಾರ ಹೆಸರು ಅಂತಿಮಗೊಳಿಸಿದ್ದು, ಸುಶೀಲ್ ಕುಮಾರ್ ಗುಪ್ತಾ ಬದಲಿಗೆ ಸ್ವಾತಿ ಮಲಿವಾಲ್ ಅವರನ್ನು ಆರಿಸಿ ಕಳೂಹಿಸಲು ಪಕ್ಷ ನಿರ್ಧರಿಸಿದೆ.

    ಇದನ್ನೂ ಓದಿ: 85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್​ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ..
    ಜ.19 ರಂದು ನಡೆಯಲಿರುವ ಚುನಾವಣೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜಕೀಯ ವ್ಯವಹಾರಗಳ ಸಮಿತಿ ಶುಕ್ರವಾರ ಪ್ರಕಟಿಸಿದೆ.

    ದೆಹಲಿಯ ಮೂವರು ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ಸುಶೀಲ್ ಕುಮಾರ್ ಗುಪ್ತಾ ಮತ್ತು ನರೇನ್ ದಾಸ್ ಗುಪ್ತಾ ಅವರ ಆರು ವರ್ಷದ ಅವಧಿ ಜ.27ಕ್ಕೆ ಮುಕ್ತಾಯವಾಗಲಿದ್ದು, ಹೊಸ ಸದಸ್ಯರನ್ನು ಆಯ್ಕೆ ಮಾಡಲು ಜ.19 ರಂದು ಮತದಾನ ನಡೆಯಲಿದೆ.

    ಇದರ ನಡುವೆ, ಎನ್‌.ಡಿ.ಗುಪ್ತಾ ಮತ್ತು ಜೈಲಿನಲ್ಲಿರುವ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಮರು ಆಯ್ಕೆ ಮಾಡಿ ಕಳೂಹಿಸಲು ತೀರ್ಮಾ ನಿಸಲಾಗಿದೆ. ಆದರೆ ಸುಶೀಲ್ ಕುಮಾರ್ ಗುಪ್ತಾ ಹರಿಯಾಣದ ಚುನಾವಣೆಯತ್ತ ಗಮನ ಕೇಂದ್ರೀಕರಿಸಬೇಕಿರುವುದರಿಂದ ಅವರ ಬದಲಿಗೆ ಸ್ವಾತಿ ಮಲಿವಾಲ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ.

    ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಮಿತಿಯು ಈ ತೀರ್ಮಅನ ತೆಗೆದುಕೊಂಡಿದೆ.

    ಸ್ವಾತಿ ಮಲಿವಾಲ್ ಯಾರು?: ಉತ್ತರ ಪ್ರದೇಶದ ಗಾಜಿಯಾಬಾದ್‌ ಮೂಲದ ಸ್ವಾತಿ ಮಲಿವಾಲ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ. ದೆಹಲಿ ಮುಖ್ಯಮಂತ್ರಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು ಭ್ರಷ್ಟಾಚಾರದ ವಿರುದ್ಧ ನಡೆದ ಚಳವಳಿಯ ಪ್ರಮುಖ ಸದಸ್ಯರಾಗಿದ್ದರು. ಅವರು ಎಎಪಿ ನಾಯಕ ನವೀನ್ ಜೈಹಿಂದ್ ಅವರನ್ನು ವಿವಾಹವಾಗಿದ್ದರು, ಆದರೆ 2020ರ ಫೆಬ್ರವರಿಯಲ್ಲಿ ವಿಚ್ಛೇದನ ಪಡೆದಿದ್ದರು.

    ಜೈಲಿನಿಂದ ಸಹಿ ಹಾಕಲು ಅನುಮತಿ: ಏತನ್ಮಧ್ಯೆ, ಚುನಾವಣೆಗೆ ಸ್ಪರ್ಧಿಸಲು ಜೈಲಿನಿಂದಲೇ ದಾಖಲೆಗಳಿಗೆ ಸಹಿ ಹಾಕಲು ಪಕ್ಷದ ನಾಯಕ ಸಂಜಯ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ. ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಅವರು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. 2023ರ ಅ.4 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಗಿದೆ.

    ಜ.7ಕ್ಕೆ ಬಾಂಗ್ಲಾ ಚುನಾವಣೆ: ವಿಪಕ್ಷಗಳಿಂದ ಬಹಿಷ್ಕಾರ..ಹಸೀನಾ ಗೆಲುವು ಸುಲಭವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts