More

    85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್​ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ..

    ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ 2023-24ರ ಪ್ಲೇಸ್‌ಮೆಂಟ್ ಸೀಸನ್‌ನ ಮೊದಲ ಹಂತವು 388 ದೇಶೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಮುಕ್ತಾಯವಾಯಿತು. ವಿಶೇಷವೆಂದರೆ 85 ವಿದ್ಯಾರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಜ.7ಕ್ಕೆ ಬಾಂಗ್ಲಾ ಚುನಾವಣೆ: ವಿಪಕ್ಷಗಳಿಂದ ಬಹಿಷ್ಕಾರ..ಹಸೀನಾ ಗೆಲುವು ಸುಲಭವೇ?
    ಭಾರತದಲ್ಲಿ ಐಐಟಿ ಪಡೆದ ಪದವೀಧರರು ಜಗತ್ತಿನಾದ್ಯಂತ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಹಲವರು ಕಂಪೆನಿಗಳನ್ನೂ ಮುನ್ನಡೆಸುತ್ತಿದ್ದಾರೆ. ನಡೆಸುತ್ತಿದ್ದಾರೆ. ಇನ್ನು ಐಐಟಿ ಬಾಂಬೆ ವಿಶೇಷವಾಗಿ ವ್ಯಾಪಾರ ಗತ್ತಿನಲ್ಲಿ ಹೆಸರು ಮಾಡಿದ ಹಳೆಯ ವಿದ್ಯಾರ್ಥಿಗಳ ದೊಡ್ಡ ಪಟ್ಟಿಯನ್ನು ಹೊಂದಿದೆ. ಐಐಟಿ ಬಾಂಬೆ ಪದವೀಧರರು ತಮ್ಮ ಪದವಿಯ ನಂತರ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಪಡೆಯಲು ಹೆಸರುವಾಸಿಯಾಗಿದ್ದಾರೆ. ಇದರ ಖ್ಯಾತಿ ಇಷ್ಟಕ್ಕೇ ನಿಂತಿಲ್ಲ. ಪ್ರಸ್ತುತ ಬ್ಯಾಚ್‌ನಲ್ಲಿ 85 ವಿದ್ಯಾರ್ಥಿಗಳು 1ಕೋಟಿ ರೂ.ಗೂ ಅಧಿಕ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ಪಡೆದಿದ್ದಾರೆ.

    ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಗ್ರೂಪ್, ಆಪಲ್, ಮೈಕ್ರೋಸಾಫ್ಟ್, ಬಜಾಜ್, ಬಾರ್ಕ್ಲೇಸ್, ಮರ್ಸಿಡಿಸ್ ಬೆಂಜ್ ಮತ್ತು ಇತರ ಕಂಪನಿಗಳು ಈ ಋತುವಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ ಭೇಟಿ ನೀಡಿದ್ದವು.

    ಐಐಟಿ ಬಾಂಬೆಯಲ್ಲಿ 2023-24ರ ಪ್ಲೇಸ್‌ಮೆಂಟ್ ಸೀಸನ್‌ನ ಮೊದಲ ಹಂತದಲ್ಲಿ 388 ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿದ್ದವು. ನೇಮಕಾತಿ ಪ್ರಕ್ರಿಯೆಯು ಕಂಪನಿಗಳು ಅಭ್ಯರ್ಥಿಗಳೊಂದಿಗೆ ವೈಯಕ್ತಿಕವಾಗಿ ಅಥವಾ ಆನ್‌ಲೈನ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತೊಡಗಿಸಿಕೊಳ್ಳುವುದನ್ನು ಒಳಗೊಂಡಿತ್ತು. 2023ರ ಡಿ.20 ರಂತೆ, ಸುಮಾರು 1,340 ಉದ್ಯೋಗ ಆಫರ್‌ಗಳನ್ನು ವಿಸ್ತರಿಸಲಾಗಿದೆ, ಇದು 1,188 ವಿದ್ಯಾರ್ಥಿಗಳ ಉದ್ಯೋಗಕ್ಕೆ ಕಾರಣವಾಯಿತು.

    ಸಂಗಾತಿ ಬಗ್ಗೆ ಮೌನ ಮುರಿದ ಇಲಿಯಾನಾ.. ಮಗು ಹುಟ್ಟಿದ ಬಳಿಕ ಮೈಕೆಲ್​ನನ್ನು ಅದ್ಭುತ ಎಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts