More

    85 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವೇತನ; IITB ಪ್ಲೇಸ್​​​ಮೆಂಟ್‌ನಲ್ಲಿ ಭರ್ಜರಿ ಅವಕಾಶ

    ಬೆಂಗಳೂರು: ಮುಂಬಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ-ಬಿ)ಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಮೊದಲ ಹಂತದ ಕ್ಯಾಂಪಸ್ ಪ್ಲೇಸ್‌ಮೆಂಟ್ ನಡೆಸಲಾಗಿದೆ. ಬರೋಬ್ಬರಿ 85 ವಿದ್ಯಾರ್ಥಿಗಳು ಬಂಪರ್ ಅವಕಾಶ ಪಡೆದುಕೊಂಡಿದ್ದು, 1ಕೋಟಿಗಿಂತ ಅಧಿಕ ವಾರ್ಷಿಕ ವೇತನದ ಆಫರ್ ತಮ್ಮದಾಗಿಸಿಕೊಂಡಿದ್ದಾರೆ.

    ಇನ್ನು 63 ವಿದ್ಯಾರ್ಥಿಗಳು ಜಪಾನ್, ತೈವಾನ್, ದಕ್ಷಿಣ ಕೊರಿಯ, ನೆದರ್‌ಲ್ಯಾಂಡ್ಸ್, ಸಿಂಗಾಪುರ್ ಹಾಗೂ ಹಾಂಗ್‌ಕಾಂಗ್‌ನಂತಹ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ರಿಸರ್ಚ್ ಹಾಗೂ ಡೆವಲಪ್‌ಮೆಂಟ್ ಸ್ಟ್ರೀಮ್‌ಗೆ ಹೆಚ್ಚು ಬೇಡಿಕೆ ಕಂಡುಬಂದಿದ್ದು, ಕಳೆದ ಬಾರಿ ದಾಖಲಾಗಿದ್ದ 32.5 ಲಕ್ಷ ಸರಾಸರಿ ವಾರ್ಷಿಕ ವೇತನವು 36.9 ಲಕ್ಷಕ್ಕೆ ಏರಿಕೆಯಾಗಿದೆ.

    ಇದಕ್ಕೆ ತದ್ವಿರುದ್ಧವಾಗಿ ಫೈನಾನ್ಸ್ ಸ್ಟ್ರೀಮ್‌ನಲ್ಲಿನ ವಾರ್ಷಿಕ ವೇತನ ಪ್ರಮಾಣವು 41.7 ಲಕ್ಷದಿಂದ 32.4ಲಕ್ಷಕ್ಕೆ ಕಡಿತಗೊಳ್ಳುವ ಮೂಲಕ ಶೇ.22 ಇಳಿಕೆ ಕಂಡಿದೆ. ಈ ಬಾರಿಯ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಇಂಜಿನಿಯರಿಂಗ್-ಟೆಕ್ನಾಲಜಿ, ಐಟಿ/ಸ್‌ಟಾವೇರ್, ಪೈನಾನ್ಸ್/ಬ್ಯಾಂಕಿಂಗ್,/ಫಿನ್‌ಟೆಕ್, ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್, ಡೇಟಾ ಸೈನ್ಸ್ ಹಾಗೂ ಅನಾಲಿಟಿಕ್ಸ್, ರಿಸರ್ಚ್ ಮತ್ತು ಡೆವಲಪ್‌ಮೆಂಟ್, ಡಿಸೈನಿಂಗ್ ಸ್ಟ್ರೀಮ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.

    ಒಟ್ಟಾರೆ, ಡಿ.20ರಂದು ಕೊನೆಗೊಂಡ ಮೊದಲ ಹಂತದ ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ 388 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಐಐಟಿ-ಬಾಂಬೆ ಆವರಣದಲ್ಲಿ ಅರ್ಹ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಗಳಿಗೆ ಆಯ್ಕೆಮಾಡಿಕೊಂಡಿವೆ. 

    ಬಿಇಎಲ್‌ನಿಂದ ಅಪ್ರೆಂಟಿಸ್ ಹುದ್ದೆಗೆ ಕರೆ; ಜನವರಿ 10ರಂದು ನೇರ ಸಂದರ್ಶನಕ್ಕೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts