More

    ಜ.7ಕ್ಕೆ ಬಾಂಗ್ಲಾ ಚುನಾವಣೆ: ವಿಪಕ್ಷಗಳಿಂದ ಬಹಿಷ್ಕಾರ..ಹಸೀನಾ ಗೆಲುವು ಸುಲಭವೇ?

    ಢಾಕಾ : ಬಾಂಗ್ಲಾದೇಶದಲ್ಲಿ ಜ. 7ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

    ಇದನ್ನೂ ಓದಿ: ಸಂಗಾತಿ ಬಗ್ಗೆ ಮೌನ ಮುರಿದ ಇಲಿಯಾನಾ.. ಮಗು ಹುಟ್ಟಿದ ಬಳಿಕ ಮೈಕೆಲ್​ನನ್ನು ಅದ್ಭುತ ಎಂದಿದ್ದೇಕೆ?

    ಪ್ರಧಾನಿ ಶೇಖ್​ಹಸೀನಾ ರಾಜೀನಾಮೆ ನೀಡಿ ಉಸ್ತುವಾರಿ ಸರ್ಕಾರದ ನೇತೃತ್ವದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಇಲ್ಲಿನ ವಿರೋಧ ಪಕ್ಷಗಳಾದ ಬಾಂಗ್ಲದೇಶ ರಾಷ್ಟ್ರೀಯ ಪಕ್ಷ (ಬಿಎನ್​ಪಿ) ಸೇರಿದಂತೆ ವಿವಿಧ ಪಕ್ಷಗಳ ಆಗ್ರಹವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿವೆ.

    ನ್ಯಾಯ ಮತ್ತು ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಭದ್ರತೆಯನ್ನು ಸೇನೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಹಾಲಿ ಪ್ರಧಾನಿ ಶೇಖ್​ ಹಸೀನಾ ಗೆಲುವುದು ಸುಲಭವಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 170 ದಶಲಕ್ಷ ಮತದಾರರು ಮತದಾನ ಹಕ್ಕು ಹೊಂದಿದ್ದಾರೆ.

    ಚುನಾವಣಾ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 750,000 ಪೊಲೀಸರು, ಅರೆಸೇನಾಪಡೆ ಮತ್ತು ಪೋಲೀಸ್ ಸಹಾಯಕರನ್ನು ನಿಯೋಜಿಸಲಾಗಿದೆ. ಅದಲ್ಲದೆ 127 ವಿದೇಶಿ ವೀಕ್ಷಕರು ಚುನಾವಣಾ ಪ್ರಕ್ರಿಯೆ ಮತ್ತು ಅದರ ನ್ಯಾಯ ಸಮ್ಮತೆಯನ್ನು ವೀಕ್ಷಿಸುತ್ತಾರೆ. ಚುನಾವಣಾ ದಿನದಂದು ವಿದೇಶದಿಂದ 59 ಪತ್ರಕರ್ತರು ಮಾತ್ರ ಮಾನ್ಯತೆ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಮತದಾನ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಕೊನೆಗೊಳ್ಳುತ್ತದೆ. ಮತದಾನ ಮುಗಿದ ಕೂಡಲೇ ಎಣಿಕೆ ಆರಂಭವಾಗಲಿದ್ದು, ಜ. 8 ರಂದು ಆರಂಭಿಕ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.

    ಈ ಬಾರಿ ಸುಮಾರು 120 ಮಿಲಿಯನ್​ ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಹಾಗೂ 15 ಮಿಲಿಯನ್ ಗೂ ಹೆಚ್ಚು ಮಹಿಳಾ ಮತದಾರರು ಮೊದಲ ಬಾರಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

    ಬಾಯ್​ಫ್ರೆಂಡ್​ ಶಿಖರ್ ಪಹಾರಿಯಾ ಜೊತೆ ತಿರುಪತಿ ಬಾಲಾಜಿ ದರ್ಶನ ಪಡೆದ ಜಾಹ್ನವಿ ಕಪೂರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts