

ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ 2024-2025ನೇ ಸಾಲಿನ ಏಳು ದಿನಗಳ ಎನ್ನೆಸ್ಸೆಸ್ ಶಿಬಿರ ಸ್ವರ್ಗದ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಡಿ.21ರಿಂದ 28ರವರೆಗೆ ನಡೆಯಲಿದೆ. ಶಿಬಿರದ ಸ್ವಾಗತ ಸಮಿತಿ ರಚನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ. ಉದ್ಘಾಟಿಸಿದರು. ಕಾಟುಕುಕ್ಕೆ ಶಾಲೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಸ್ವರ್ಗ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್, ಪಿಟಿಎ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ, ಕಾಟುಕುಕ್ಕೆ ಶಾಲೆ ಪಿಟಿಎ ಅಧ್ಯಕ್ಷ ಸುಧಾಕರ್ ಕಲ್ಲಗದ್ದೆ, ಶಿಕ್ಷಕ ಸಂದೀಪ್, ಸ್ವರ್ಗ ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್., ಮಾತೃಮಂಡಳಿ ಅಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಸ್ವಾಗತಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಯೋಜನಾಧಿಕಾರಿ ವಾಣಿ ಕೆ. ನಿರೂಪಿಸಿದರು. ಹಿರಿಯ ಶಿಕ್ಷಕ ವಿದ್ಯಾಸಾಗರ್ ವಂದಿಸಿದರು.
ಸಮಿತಿ ಪದಾಧಿಕಾರಿಗಳು: ಶಿಬಿರದ ಅಧ್ಯಕ್ಷರಾಗಿ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಕೆ.ವೈ.ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಎಂ., ಸಂಚಾಲಕರಾಗಿ ಸಚ್ಚಿದಾನಂದ ಎಸ್., ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಶಿವರಾಮ ಭಟ್ ಪಡ್ಪು, ಸಂಚಾಲಕರಾಗಿ ಮಿಥುನ್ ವಿ.ಆರ್., ಆಹಾರ ಸಮಿತಿ ಅಧ್ಯಕ್ಷರಾಗಿ ಕಾರ್ತಿಕ್ ಶಾಸ್ತ್ರಿ, ಸಂಚಾಲಕರಾಗಿ ಕಲಾವತಿ, ಸಾರ್ವಜನಿಕ ಸಂಪರ್ಕ(ಮಾಧ್ಯಮ) ಸಮಿತಿ ಅಧ್ಯಕ್ಷರಾಗಿ ಅಜಿತ್ ಸ್ವರ್ಗ, ಸಂಚಾಲಕರಾಗಿ ರವಿ ವಾಣೀನಗರ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹೃಷಿಕೇಶ ವಿ.ಎಸ್., ಸಂಚಾಲಕರಾಗಿ ಗೀತಾ ಕುಮಾರಿ ಆಯ್ಕೆಯಾದರು.