ಶ್ರೀರಾಮ ಕಲಾ ವೇದಿಕೆಯಿಂದ ಸೆ.27ಕ್ಕೆ ಸ್ವರ ಸಂಧ್ಯಾ ಸಂಗೀತ ಸಂಜೆ ಕಾರ್ಯಕ್ರಮ

Published on

ಬೆಂಗಳೂರು : ಶ್ರೀರಾಮ ಕಲಾ ವೇದಿಕೆ ಆಯೋಜಿಸಿರುವ ಸ್ವರ ಸಂಧ್ಯಾ ಸಂಗೀತ ಸಂಜೆ ಕಾರ್ಯಕ್ರಮವು ಸೆ.27ಕ್ಕೆ ಸಂಜೆ 5.30ಕ್ಕೆ ನಡೆಯಲಿದೆ. ಭಾರತೀಯ ವಿದ್ಯಾಭವನದ ಇಎಸ್‌ವಿ ಹಾಲ್‌ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಲವು ಸಂಗೀತ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.

ತಬಲ ವಾದನದಲ್ಲಿ ಮಿಲಿಂದ್ ಮತ್ತು ಹಾರ್ಮೋನಿಯಂನಲ್ಲಿ ವಿಶ್ವಜಿತ್ ಕಿಣಿ ಭಾಗಿಯಾಗಲಿದ್ದಾರೆ. ಗಾಯನದಲ್ಲಿ ಪಂಡಿತ್ ರಾಮ್ ದೇಶಪಾಂಡೆ ಅವರಿಗೆ ವಾದ್ಯ ಸಹಯೋಗದಲ್ಲಿ ತಬಲವನ್ನು ಡಾ.ಉದಯರಾಜ್ ಕರ್ಪೂರ್, ಹಾಮೋನಿಯಂ ಡಾ.ರವಿಂದ್ರ ಕಟೋಟಿ ನುಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net