More

  ಜೂನ್ 29ರಂದು ಸ್ವರ ಫೌಂಡೇಷನ್ ಸಂಗೀತೋತ್ಸವ: ಯಾರೆಲ್ಲಾ ಗಾಯನ, ಸಂಗೀತ ಕಛೇರಿ ನಡೆಸಲಿದ್ದಾರೆ?

  ಬೆಂಗಳೂರು ಸ್ವರ ಫೌಂಡೇಷನ್ ವತಿಯಿಂದ ಇದೇ 29ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಂಗೀತೋತ್ಸವ’ವನ್ನು ಆಯೋಜಿಸಿದೆ.

  ಅಂದು ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

  ಹೆಸರಾಂತ ಸಂಗೀತಗಾರರಾದ ಭಾರತಿದೇವಿ ರಾಜಗುರು, ಹಿಂದೂಸ್ಥಾನಿ ಗಾಯಕರಾದ ಪಂ. ವಿನಾಯಕ ತೊರವಿ ಮತ್ತು ಪಂ. ವೆಂಕಟೇಶಕುಮಾರ್ ಅವರನ್ನು ಸನ್ಮಾನಿಸಲಾಗುತ್ತದೆ. ಹಿರಿಯ ಸಾಹಿತಿ ಡಾ. ಚಂದ್ರಶೇಕರ ಕಂಬಾರ, ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಷಿ, ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಕಾರ್ಯದರ್ಶಿ ಬಲವಂತರಾವ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ.

  ಸಂಗೀತ ಜುಗಲ್‌ಬಂದಿ:

  ಪಂ.ಶೈಲೇಶ ಭಾಗವತ್ ಅವರು ಶಹನಾಯಿಯಲ್ಲಿ ಹಾಗೂ ಉಸ್ತಾದದ ರಫೀಕ್ ಖಾನ್ ಸಿತಾರ್ ಜುಗಲ್‌ಬಂದಿ ಸಂಗೀತಪ್ರಿಯರಿಗೆ ರಸದೌತಣ ನೀಡಲಿದೆ. ಭರತನಾಟ್ಯ ಕಲಾವಿದೆ ವಿ ಮಾಳವಿಕಾ ನಾಯರ್, ಹಿಂದೂಸ್ಥಾನಿ ಗಾಯಕ ಡಾ. ಮುದ್ದು ಮೋಹನ್ ಅವರಿಂದ ಗಾಯನ ನಡೆಯಲಿದೆ. ಪಂ. ವೆಂಕಟೇಶಕುಮಾರ್ ಸಂಗೀತ ಕಛೇರಿ ನಡೆಯಲಿದೆ.

  See also  ಕೊಡಗಿನಲ್ಲೂ ಇದೆ ಡ್ರಗ್ಸ್ ಜಾಲ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts