ಡೈವಿಂಗ್‌ನಲ್ಲಿ ನಂದನ್ ನಾಕ್‌ಗೆ ಚಿನ್ನದ ಪದಕ

PTR_28 JUL_6
Published on

ಪುತ್ತೂರು: ಕರ್ನಾಟಕ ಈಜು ಸಂಸ್ಥೆ ಜು.೨೫ರಿಂದ ೨೭ರವರೆಗೆ ಬೆಂಗಳೂರಿನ ಕೆನ್ಸಿಂಗ್‌ಟನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಡೆಸಿದ ಎನ್‌ಆರ್‌ಜೆ ಸ್ಟೇಟ್ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಡೈವಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಂತ ಫೀಲೋಮಿನಾ ಕಾಲೇಜು ವಿದ್ಯಾರ್ಥಿ ನಂದನ್ ನಾಕ್ ೨೪೩.೯೫ ಕ್ಲಾಕಿಂಗ್ ಪಾಯಿಂಟ್‌ನೊಂದಿಗೆ ೩ ಮೀಟರ್ ಸ್ಪ್ರಿಂಗ್ ಬೋರ್ಡ್‌ನಲ್ಲಿ ಚಿನ್ನದ ಪದಕ ಹಾಗೂ ಹೈ ಬೋರ್ಡ್‌ನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೈವಿಂಗ್‌ನಲ್ಲಿ ಚಿನ್ನ ಗೆದ್ದ ಮೊದಲ ಡೈವರ್ ಆಗಿ ಹೊರಹೊಮ್ಮಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆ ಬೆಂಗಳೂರಿನಲ್ಲಿ ಅ.೪ರಿಂದ ೮ರ ತನಕ ನಡೆಯಲಿದೆ. ಈತ ಮುಕ್ವೆ ಮಜಲುಮಾರು ನಿವಾಸಿ ರವಿ ಸಂಪತ್ ನಾಕ್ ಮತ್ತು ಕ್ಷಮಿತಾ ದಂಪತಿ ಪುತ್ರ. ಪಾರ್ಥ ವಾರಣಾಶಿ, ವೆಂಕಟೇಶ್, ವಿಕಾಸ್ ಅವರಲ್ಲಿ ಡೈವಿಂಗ್ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net