ಮಠಾಧೀಶರಿಂದ ಚಾತುರ್ಮಾಸ್ಯ ದೀಕ್ಷೆ ಸಮಾಪನ

udp-7-sode
Published on

ಉಡುಪಿ: ಅನಂತ ಹುಣ್ಣಿಮೆ ದಿನ ಭಾನುವಾರ ವಿವಿಧ ಮಠಾಧೀಶರು ಚಾತುರ್ಮಾಸ್ಯ ದೀಕ್ಷೆ ಸಮಾಪನಗೊಳಿಸಿ, ಸೀಮೋಲ್ಲಂನ ಮಾಡಿದ್ದಾರೆ.

ಹರಿದ್ವಾರದ ಬಡೇ ಹನುಮಾನ್​ ಮಂದಿರದಲ್ಲಿ ವೃತದೀಕ್ಷೆ ಸ್ವೀಕರಿಸಿದ್ದ ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹಿಮಾಚಲ ಪ್ರದೇಶದ ಪೌಂಟಾ ಸಾಹೀಬ್​ನಲ್ಲಿ ಯಮುನಾ ನದಿಯಲ್ಲಿ ತೀರ್ಥ ಸ್ನಾನದೊಂದಿಗೆ ಸೀಮೋಲ್ಲಂನೆ ಮಾಡಿದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪಿಠದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳವಾರ ಅಯೋಧ್ಯೆಗೆ ತೆರಳಲಿದ್ದಾರೆ. ಜೊತೆಗಿದ್ದ ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಮುಂಬೈಗೆ ತೆರಳಿದ್ದಾರೆ. ಚೆನ್ನೆ$ ಅಣ್ಣಾ ನಗರ ಪಲಿಮಾರು ಮಠದಲ್ಲಿ ಸಂಕಲ್ಪ ಕೈಗೊಂಡಿದ್ದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಸೋಮವಾರ ಬದ್ರಿಗೆ ತೆರಳಲಿದ್ದಾರೆ. ಶಿರಸಿ ಸೋಂದಾ ಕ್ಷೇತ್ರದಲ್ಲಿರುವ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸೋಮವಾರ ಉಡುಪಿಗೆ ಆಗಮಿಸಲಿದ್ದಾರೆ. ಟಿಕಾಚಲದಲ್ಲಿ ದೀೆಯಲ್ಲಿದ್ದ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಯೋಗಾಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net