ಸುವರ್ಣ ಸಂಭ್ರಮ ಯಶಸ್ಸಿಗೆ ಸಹಕಾರ

Ull_Mandira
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸುವರ್ಣ ಸಂಭ್ರಮ ಎಂದರೆ ದೊಡ್ಡ ಮಟ್ಟದ ಊರಿನ ಕಾರ್ಯಕ್ರಮ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಯಶಸ್ಸು ಕಾಣಬೇಕಾದರೆ ಸರ್ವರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಸುರೇಶ್ ಭಟ್ನಗರ ಹೇಳಿದರು.

ತೊಕ್ಕೊಟ್ಟು ಕಾಪಿಕಾಡು ಈಶ್ವರಾನಂದ ಭಜನಾ ಮಂದಿರದ ಆವರಣಕ್ಕೆ ಮೇಲ್ಛಾವಣಿ ಕಾಮಗಾರಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ ಚೆಂಬುಗುಡ್ಡೆ, ಉಪಾಧ್ಯಕ್ಷೆ ಸಪ್ನಾ ಹರೀಶ್, ಈಶ್ವರಾನಂದ ಭಜನಾ ಮಂದಿರದ ಅಧ್ಯಕ್ಷ ಹರಿಶ್ಚಂದ್ರ, ಕೋಶಾಧಿಕಾರಿ ದೇವದಾಸ್ ಉಳ್ಳಾಲ್, ಹಿರಿಯರಾದ ರಾಮಣ್ಣ, ನಗರಸಭಾ ಸದಸ್ಯರಾದ ಭವಾನಿ, ಬಾಝಿಲ್ ಡಿಸೋಜ, ರವಿ ಎಸ್.ಉಳ್ಳಾಲ್, ದಮಯಂತಿ ಕಾಪಿಕಾಡ್, ನಿವೃತ್ತ ಅಧಿಕಾರಿ ಪ್ರಭಾಕರ ಉಳ್ಳಾಲ್, ಗುತ್ತಿಗೆದಾರ ಮಸೂದ್ ಚಿಕ್ಕಮಗಳೂರು, ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಮಂದಿರದ ಮೇಲ್ಛಾವಣಿಗೆ ಅನುದಾನಕ್ಕಾಗಿ ಇದುವರೆಗೆ ಮನವಿ ಸಲ್ಲಿಸಿರಲಿಲ್ಲ. ಆದರೆ ಸುವರ್ಣ ಮಹೋತ್ಸವ ಸನಿಹದಲ್ಲಿ ಮಾಡಿದ ಮನವಿಗೆ ಶಾಸಕರು ತಕ್ಷಣವೇ ಸ್ಪಂದಿಸಿ ಮೇಲ್ಛಾವಣಿ ವ್ಯವಸ್ಥೆಗೆ ಅನುದಾನ ನೀಡಿದ್ದಾರೆ. ಇಷ್ಟೊಂದು ತುರ್ತಾಗಿ ಅನುದಾನ ನೀಡಿರುವುದು ಪ್ರಥಮವಾಗಿದೆ. ಶಾಸಕರಿಗೆ ಸ್ಥಳೀಯ ಪರಿಸರದ ಬಗ್ಗೆ ಇರುವ ಒಲವು ಇದಕ್ಕೆ ಕಾರಣ. - ಸುರೇಶ್ ಭಟ್ನಗರ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯರು https://www.vijayavani.net/history-in-tulu-rituals https://www.vijayavani.net/vidyashree-school-achievement-in-kalotsava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net