More

  ಬಿಹಾರದದಲ್ಲಿ 5 ಜನರ ಅನುಮಾನಾಸ್ಪದ ಸಾವು – ವಿಷಪೂರಿತ ಮದ್ಯ ಸೇವನೆ ಕಾರಣವೇ?

  ಪಾಟ್ನಾ: ಬಿಹಾರದ ಗೋಪಾಲ್‌ಗಂಜ್‌ನಲ್ಲಿ 5 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವಿಷಪೂರಿತ ಮದ್ಯ ಸೇವನೆಯಿಂದ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಮೃತರು 25 ರಿಂದ 65 ವರ್ಷದೊಳಗಿನವರಾಗಿದ್ದು, ಘಟನೆಯ ನಂತರ ಮೃತರ ಕುಟುಂಬಗಳಲ್ಲಿ ಕೋಲಾಹಲ ಉಂಟಾಗಿದೆ. ಮತ್ತೊಂದೆಡೆ ಇವರ ಸಾವಿಗೆ ಅನಾರೋಗ್ಯ, ವಿಷಾಹಾ, ಹೃದಯಾಘಾತ ಕಾರಣವಿರಬಹುದು ಎಂದು ಜಿಲ್ಲಾಡಳಿತ ಹೇಳಿದೆ.

  ಇದನ್ನೂ ಓದಿ: ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್​​​ನಲ್ಲಿ ಇಡುವುದು ತುಂಬಾ ಅಪಾಯಕಾರಿ!
  ಗೋರಖ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಒಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ.
  ಬೈಕುಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಘಟನೆ ನಡೆದಿದೆ. ಮೃತರನ್ನು ಸಿರ್ಸಾ ಗ್ರಾಮದ ಸಿಕಂದರ್ ಸಾಹ್(50), ಬಹರಂಪುರದ ಸುರೇಶ್ ರಾಮ್(55), ಟಿಂಕು ರಾಮ್(30), ರೋಹಿತ್(25), ಬೈಕುಂತ್‌ಪುರದ ಜಗ್ರು ರಾಮ್(65) ಎಂದು ಗುರುತಿಸಲಾಗಿದೆ.

  ಗೋಪಾಲಗಂಜ್ ಎಸ್ ಡಿಎಂ ಡಾ.ಪ್ರದೀಪ್ ಕುಮಾರ್ ಮಾತನಾಡಿ, ಇವರೆಲ್ಲರೂ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಿಕಂದರ್ ಸಾಹ್ ಅಸ್ತಮಾ ರೋಗಿಯಾಗಿದ್ದು, ಎದೆ ಉರಿಗಾಗಿ ಔಷಧ ನೀಡಲಾಯಿತು. ಅವರು ನ.19 ರಂದು ಮನೆಯಲ್ಲಿ ನಿಧನರಾದರು. ಸುರೇಶ್ ರಾಮ್ ಆಹಾರ ವಿಷದಿಂದ ಮೃತಪಟ್ಟಿದ್ದಾರೆ. ಟಿಂಕು ರಾಮ್ ಅನಾರೋಗ್ಯದಿಂದ, ರೋಹಿತ್ ಶರ್ಮಾ ಹಸಿವಿನಿಂದ, ಜಗ್ರು ರಾಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

  ವಿಷಯುಕ್ತ ಮದ್ಯದಿಂದ ಸಾವು: ಬೈಕುಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ ಐದರಿಂದ ಆರು ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳು ಈ ವಿಷಯವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥೆಲೇಶ್ ತಿವಾರಿ ತಿಳಿಸಿದ್ದಾರೆ.

  ಚಿಕ್ಕಮಗಳೂರಿನಲ್ಲಿ ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts