

ಮೈಸೂರು: ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಸಂದರ್ಭದಲ್ಲಿ ಹಣ ವಸೂಲಿ ವಾಡಿದ ಆರೋಪದಡಿ ಹೆಡ್‌ಕಾನ್‌ಸ್ಟೇಬಲ್ ಸೋಮಶೇಖರ್ ಅವರನ್ನು ಅವಾನತು ವಾಡಲಾಗಿದೆ.
ಎನ್.ಆರ್.ಸಂಚಾರ ಠಾಣೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. 2023ರ ನವೆಂಬರ್ 28ರಂದು ರಾತ್ರಿ ಮಣಿಪಾಲ ಆಸ್ಪತ್ರೆಯ ವತ್ತದಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕರನ್ನು ತಪಾಸಣೆ ವಾಡಲಾಗುತ್ತಿತ್ತು. ಆ ವೇಳೆ ಮಂಡ್ಯದಿಂದ ಬಂದ ನವೀನ್ ಎಂಬುವರ ಕಾರ್‌ಅನ್ನು ಸೋಮಶೇಖರ್ ತಡೆದು ತಪಾಸಣೆ ವಾಡಿದ್ದಾರೆ. ಆಗ ಚಾಲಕ ನವೀನ್ ಮದ್ಯ ಸೇವಿಸಿರುವುದು ಪತ್ತೆಯಾಗಿದೆ.
ನವೀನ್‌ನನ್ನು ಎನ್.ಆರ್. ಸಂಚಾರ ಠಾಣೆಗೆ ಕರೆದೊಯ್ಯಲಾಗಿದೆ. ಕಾರು ಬಿಡಲು ಸೋಮಶೇಖರ್ 10 ಸಾವಿರ ರೂ. ಬೇಡಿಕೆಯಿಟ್ಟಿದ್ದಾರೆ. ಇದೇ ವೇಳೆ ಹೆಡ್ ಕಾನ್‌ಸ್ಟೇಬಲ್ ತನ್ನ ಸ್ನೇಹಿತ ರಮೇಶ್ ಗೌಡಗೆ ಗೂಗಲ್ ಪೇ ಮೂಲಕ ಹಣ ಕಳುಹಿಸುವಂತೆ ಸೂಚಿಸಿದ್ದಾರೆ. ಅದರಂತೆ ಹಣ ರವಾನಿಸಲಾಗಿದೆ. ಬಳಿಕ ಮಧ್ಯರಾತ್ರಿ 1.30ಕ್ಕೆ 5 ಸಾವಿರ ರೂ.ಹಣವನ್ನು ಗೂಗಲ್ ಪೇ ಮೂಲಕ ರಮೇಶ್ ವಾಪಸ್ ವಾಡಿದ್ದಾರೆ.
ಈ ವಿಷಯ ಠಾಣಾಧಿಕಾರಿ ಗಮನಕ್ಕೆ ತರಲಾಗಿತ್ತು. ಕರ್ತವ್ಯಲೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಮಶೇಖರ್ ಅವರನ್ನು ಅವಾನತು ವಾಡಿ ಡಿಸಿಪಿ ಜಾಹ್ನವಿ ಅವರು ಜು.2ರಂದು ಆದೇಶ ಹೊರಡಿಸಿದ್ದಾರೆ.