ರಾಜಸ್ಥಾನದಲ್ಲಿ ಶಂಕಿತ ಪಾಕಿಸ್ತಾನಿ ಪ್ರಜೆ ಬಂಧನ; ಇದೆಲ್ಲಾ ‘ಡ್ರೈ ರನ್’ ಭಾಗವೆಂದು ಭದ್ರತಾ ಪಡೆ ಶಂಕೆ

Untitled-design-2024-08-25T181422.326
Published on

ಜೈಪುರ: ರಾಜಸ್ಥಾನದ ಬಾರ್ಮರ್​​ನಿಂದ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪೊಲೀಸರು ಭಾನುವಾರ (ಆಗಸ್ಟ್​​ 25) ಬಂಧಿಸಿದ್ದಾರೆ. ಖರೋಡಿ ಜಿಲ್ಲೆಯ ಪಾಕಿಸ್ತಾನದ ಆಕ್ಲಿ ಗ್ರಾಮದ ನಿವಾಸಿ ಎಂದು ಹೇಳಿಕೊಂಡ ಜಗ್ಸಿ ಕೋಲಿಯನ್ನು (21) ಬಾರ್ಮರ್‌ನ ಸೆಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನಯಾ ತಾಲ್ ಗಡಿ ಪೋಸ್ಟ್‌ನಿಂದ ಬಂಧಿಸಲಾಗಿದೆ. ಶಂಕಿತನನ್ನು ಬಿಎಸ್‌ಎಫ್ ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಶನಿವಾರ ಮಧ್ಯರಾತ್ರಿ ಪಾಕಿಸ್ತಾನದಿಂದ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ. ದಿನನಿತ್ಯದ ಗಸ್ತು ಮತ್ತು ಕಣ್ಗಾವಲು ತಪಾಸಣೆಯ ಸಮಯದಲ್ಲಿ ಅಧಿಕಾರಿಗಳಿಗೆ ಆತನ ಹೆಜ್ಜೆ ಗುರುತು ಸುಳಿವು ನೀಡಿದೆ. ಹೆಜ್ಜೆ ಗುರುತನ್ನು ಹಿಂಬಾಲಿಸಿದ ಬಿಎಸ್​ಎಫ್​ ಅಧಿಕಾರಿಗಳಿಗೆ ಸೆಡ್ವಾ ಪೊಲೀಸ್​ ಠಾಣೆ ವ್ಯಾಪ್ತಿಯ ಜಡ್ಪಾ ಗ್ರಾಮದಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಶಂಕಿತ ಪಾಕಿಸ್ತಾನಿ ಪ್ರಜೆಯ ಬಂಧನವನ್ನು ಚೋಹ್ತಾನ್‌ನ ಸರ್ಕಲ್ ಆಫೀಸರ್ ಕೃತಿಕಾ ಯಾದವ್​​ ದೃಢಪಡಿಸಿದ್ದಾರೆ. ಬಿಎಸ್‌ಎಫ್‌ನಿಂದ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ. ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು. ಪ್ರಧಾನಿಯವರ ಭೇಟಿಯ ಮಧ್ಯೆ ಈ ಪ್ರದೇಶಕ್ಕೆ ಶಂಕಿತ ಪಾಕಿಸ್ತಾನಿ ಪ್ರಜೆ ಬಂಧಿರುವುದು ಗಂಭೀರ ಭದ್ರತಾ ಲೋಪವೆಂದು ತಜ್ಞರು ಪರಿಗಣಿಸಿದ್ದಾರೆ. ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಬೇಲಿ ಇರುವಾಗ ಯಾರಾದರೂ ಗಡಿಯನ್ನು ಹೇಗೆ ದಾಟುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಭಾರತದ ಗಡಿಯಲ್ಲಿನ ಭದ್ರತೆಯನ್ನು ಪರೀಕ್ಷಿಸಲು ಮತ್ತು ಭಾರತದ ಭೂಪ್ರದೇಶಕ್ಕೆ ಅವರು ಸುಲಭವಾಗಿ ನುಸುಳಬಹುದಾದ ಸ್ಥಳಗಳನ್ನು ಗುರುತಿಸಲು ಪಾಕಿಸ್ತಾನಿ ಏಜೆನ್ಸಿಗಳ ತಂತ್ರವು 'ಡ್ರೈ ರನ್' ವ್ಯಾಯಾಮದ ಭಾಗವಾಗಿರುವ ಇಂತಹ ಪ್ರಯತ್ನಗಳ ಸಾಧ್ಯತೆ ಎಂದು ಭದ್ರತಾ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net