ಸುಶಾಂತ್ ಶಿಸ್ತಿನ ವ್ಯಕ್ತಿ; ಯಾವುದೇ ಚಟಗಳಿರಲಿಲ್ಲ: ಮ್ಯಾನೇಜರ್

Sushant-Singh-Rajaput-Final-1
Published on

ಸುಶಾಂತ್ ಡ್ರಗ್ಸ್ ಸೇವಿಸುತ್ತಿದ್ದರಾ? ಅಥವಾ ಇಲ್ಲವಾ?

ಇಂಥದ್ದೊಂದು ಪ್ರಶ್ನೆ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕುಟುಂಬದವರು ಸುಶಾಂತ್‍ಗೆ ಯಾವುದೇ ದುಶ್ಚಟಗಳಿರಲಿಲ್ಲ ಎಂದು ಹೇಳಿದರೆ, ರಿಯಾ ಮಾತ್ರ ಸುಶಾಂತ್ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. ಇನ್ನು ಕಂಗನಾ ರಣಾವತ್ ಸಹ, ಸುಶಾಂತ್‍ಗೆ ದುಶ್ಚಟಗಿಳಿರುವ ವಿಷಯದಲ್ಲಿ ಸಾಕಷ್ಟು ಸಂಶಯವಿದ್ದು, ಬಹುಶಃ ಬಲವಂತವಾಗಿ ಡ್ರಗ್ಸ್ ಕೊಟ್ಟಿರುವ ಸಾಧ್ಯತೆ ಇದ್ದಿರಬಹುದು ಎಂದು ಹೇಳಿಕೊಂಡಿದ್ದಾರೆ.

ಹೀಗೆ ಯಾವುದು ಸರಿ, ಯಾವುದು ಸುಳ್ಳು ಎಂಬ ಗೊಂದಲದಲ್ಲಿ ಎಲ್ಲರೂ ಇರುವಾಗಲೇ, ಸುಶಾಂತ್ ಅವರ ಹಳೆಯ ಮ್ಯಾನೇಜರ್ ಆಗಿದ್ದ ಅಂಕಿತ್ ಆಚಾರ್ಯ ಎನ್ನುವವರು, ಸುಶಾಂತ್‍ಗೆ ಯಾವುದೇ ದುಶ್ಚಟಗಳಿರಲಿಲ್ಲ, ಅವರು ಬಹಳ ಶಿಸ್ತಿನ ವ್ಯಕ್ತಿ ಎಂದು ಹೇಳಿದ್ದಾರೆ.

ಅಂಕಿತ್, ಸುಶಾಂತ್ ಅವರ ಮ್ಯಾನೇಜರ್ ಆಗಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 2019ರ ಅಕ್ಟೋಬರ್‍ನಲ್ಲಿ ಅವರು ಕೆಲಸ ಬಿಟ್ಟು ಬೇರೆ ಕಡೆ ಹೋದರಂತೆ. ಎರಡು ವರ್ಷಗಳ ಕಾಲ ಸುಶಾಂತ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದ ಅಂಕಿತ್, ಸುಶಾಂತ್ ಬಗ್ಗೆ ಟೈಮ್ಸ್ ನೌ ಚಾನಲ್‍ನಲ್ಲಿ ಮಾತನಾಡಿದ್ದಾರೆ.

`ಸುಶಾಂತ್ ಬಹಳ ಶಿಸ್ತಿನ ವ್ಯಕ್ತಿ. ಅದೆಷ್ಟು ಶಿಸ್ತಿನ ವ್ಯಕ್ತಿ ಎಂದರೆ, ಬಾಲಿವುಡ್‍ಮನಲ್ಲಿ ಅಕ್ಷಯ್ ಕುಮಾರ್ ಬಿಟ್ಟರೆ, ಅವರಲ್ಲೇ ನಾನು ಅಷ್ಟೊಂದು ಶಿಸ್ತನ್ನು ನೋಡಿದ್ದು. ಮುಂದಿನ ದಿನ ಏನೆಲ್ಲಾ ಮಾಡಬೇಕು ಎಂದು ಹಿಂದಿನ ದಿನವೇ ನೋಟ್ಸ್ ಮಾಡಿಟ್ಟುಕೊಳ್ಳುತ್ತಿದ್ದರು. ಬಹಳ ಆರೋಗ್ಯಕರವಾದ ಆಹಾರ ಸೇವಿಸುವುದರ ಜತೆಗೆ ಡಯಟ್ ಮಾಡುತ್ತಿದ್ದರು. ಇನ್ನು ಪ್ರೋಟೀನ್ ಶೇಕ್ ಮತ್ತು ಕ್ಯಾಲ್ಶಿಯಮ್ ಮಾತ್ರೆಗಳನ್ನು ಸೇವಿಸುತ್ತಿದ್ದರು. ಅವರಿಗೆ ಯಾವುದೇ ದುಶ್ಚಟಗಳಿರಲಿಲ್ಲ' ಎಂದು ಅಂಕಿತ್ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net